ಪಕ್ಷಕ್ಕೆ ತಲೆಬಾಗಿ ಉಪವಾಸ ಕೈಬಿಟ್ಟೆ: ಕುಮಾರಸ್ವಾಮಿ
ಬೆಂಗಳೂರು
ಜು 10: ವೈಯಕ್ತಿವಾಗಿ ಇಷ್ಟವಿಲ್ಲದಿದ್ದರೂ ಪಕ್ಷಕ್ಕೆ ತಲೆಬಾಗಿ ಉಪವಾಸ ಸತ್ಯಾಗ್ರಹ ಕೈಬಿಡುತ್ತಿರುವುದಾಗಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಸುಮಾರು 24 ಗಂಟೆಗಳ ಉಪವಾಸ ನಿಲ್ಲಿಸಿದ ಅವರು ಬಿಜೆಪಿ ಪಕ್ಷ ವೈಯಕ್ತಿಕ ಮಟ್ಟದಲ್ಲಿ ಕ್ಷುಲ್ಲಕ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದೂ ಇದೇ ವೇಳೆ ಗುಡುಗಿದರು. id="toptextpromo">ಉಪವಾಸ
ಸತ್ಯಾಗ್ರಹದಿಂದ ಹಿಂದಕ್ಕೆ ಸರಿದೆ ಎಂಬ ಕಳಂಕ ಬೇಡ. ಆದರೆ ನಮ್ಮ ತಾಯಿಯರವರು ಇಂದು ಬೆಳಗ್ಗೆ ಫೋನ್ ಮಾಡಿ ಉಪವಾಸ ಮಾಡಬೇಡ ಕುಮಾರ ಎಂದಿದ್ದರು. ಜತೆಗೆ, ನಾಡಿನ ಅನೇಕ ಬುದ್ಧಿಜೀವಿಗಳು ಭವಿಷ್ಯದಲ್ಲಿ ಪಕ್ಷಕ್ಕೆ ಇನ್ನೂ ಸಾಕಷ್ಟು ದುಡಿಯಬೇಕಿರುವುದರಿಂದ ಉಪವಾಸ ನಿಲ್ಲಿಸಿ ಎಂದು ಕೋರಿದರು. ಹಿರಿಯರಿಗೆ ತಲೆಬಾಗಿ ಅನಿವಾರ್ಯವಾಗಿ ಉಪವಾಸ ಕೈಬಿಟ್ಟೆ ಎಂದು ಕುಮಾರಸ್ವಾಮಿ ಸಮಜಾಯಿಷಿ ನೀಡಿದರು. id='are-slot-1' class='oiad oi-axt oiadv'> id='top-searched-articles'>ಇದೇ
ವೇಳೆ, ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಅವರು, ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.











Click it and Unblock the Notifications