ಆ ಸಮಿತಿ ಮುಂದೆ ಲೈಂಗಿಕ ಕಿರುಕುಳ ಕಥೆ ಹೇಗೆ ಹೇಳಲಿ?

ಸರಿತಾ ಮೇಲೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯಲ್ಲಿ ಪ್ರೊ ಶಿವಬಸವಯ್ಯ ತಪ್ಪಿತಸ್ಥ ಎಂದು ಮಹಿಳಾ ದೌರ್ಜನ್ಯ ದೂರು ಸಮಿತಿ ನೀಡಿದ ವರದಿ ಮೂಲೆಗುಂಪಾಗಿದೆ. ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲೂ ಶಿವಬಸವಯ್ಯ ಅವರ ವಿರುದ್ಧ ಯಾವುದೇ ನಿರ್ಣಯ ಹೊರ ಬಿದ್ದಿಲ್ಲ. ಇಲಾಖಾ ವರದಿ ಬಂದ ಬಳಿಕ ಚರ್ಚೆ ನಡೆಸುವ ತೀರ್ಮಾನ ಕೈಗೊಳ್ಳುವುದಾಗಿ ವಿವಿ ಆಡಳಿತ ಮಂಡಳಿ ಹೇಳಿತ್ತು.
ಇದನ್ನು ಪ್ರಶ್ನಿಸಿ ಸರಿತಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ನ್ಯಾಯಕ್ಕಾಗಿ ಅಂಗಲಾಚಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇಲಾಖೆ ತನಿಖೆ ನಡೆಸುತ್ತಿರುವ ಸಮಿತಿ ಜು 11 ರಂದು ಮತ್ತೆ ವಿಚಾರಣೆ ನಡೆಸಲಿದೆ. ಸಮಿತಿ ಎದುರು ಹಾಜರಾಗಲು ಸರಿತಾಗೆ ವಿವಿ ನೋಟಿಸ್ ನೀಡಿದೆ.
ಪುರುಷರೇ ಹೆಚ್ಚಾಗಿರುವ ಸಮಿತಿ ಎದುರು ಹಾಜರಾಗಿ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೆ ನೀಡುವುದು ಮುಜುಗರ ಉಂಟು ಮಾಡುತ್ತದೆ. ಆದ್ದರಿಂದ ಇನ್ನು ಮುಂದೆ ಇಂಥ ಯಾವುದೇ ಪುರುಷ ನೇತೃತ್ವದ ಸಮಿತಿ ಎದುರು ಹಾಜರಾಗುವುದಿಲ್ಲ ಎಂದು ಸರಿತಾ ಸ್ಪಷ್ಟಪಡಿಸಿದ್ದಾರೆ. ಕೊನೆ ಪ್ರಯತ್ನ ಎಂಬಂತೆ ರಾಜ್ಯಪಾಲರನ್ನು ಭೇಟಿ ಮಾಡಿ ನ್ಯಾಯಕ್ಕಾಗಿ ಮೊರೆ ಇಡುತ್ತೇವೆ ಸರಿತಾ ಹಾಗೂ ಪತಿ ವಿಜಯ್ ಹೇಳಿದ್ದಾರೆ.












Click it and Unblock the Notifications