ಒಂಟಿ ಗೃಹಿಣಿ ಯಾಮಾರಿಸಿ 30 ಲಕ್ಷ ಆಭರಣ ದೋಚಿ ಪರಾರಿ
ಬೆಂಗಳೂರು
ಜು 8: ಎಲ್ ಪಿಜಿ ಸಿಲಿಂಡರ್ ಪೂರೈಕೆ ಮಾಡುವ ನೆಪದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಒಂಟಿಯಾಗಿದ್ದ ಮಹಿಳೆಯನ್ನು ಕೊಠಡಿಯಲ್ಲಿ ಕೂಡಿಹಾಕಿ ಅಭರಣಗಳನ್ನು ದೋಚಿದ ಘಟನೆ ಮಾರುತಿನಗರದಲ್ಲಿ ನಡೆದಿದೆ. ಸುಮಾರು 30 ಲಕ್ಷ ರು ಬೆಲೆ ಬಾಳುವ ಚಿನ್ನಾಭರಣದ ಕಳ್ಳತನವಾಗಿದೆ ಎಂದು ಮಡಿವಾಳ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಪುರುಷೋತ್ತಮ್ ಹೇಳಿದ್ದಾರೆ. id="toptextpromo">ರಾಜಸ್ಥಾನ
ಮೂಲದ ಸೋಹನ್‌ಕುಮಾರ್ ಅವರು ವಾಸವಾಗಿರುವ ಮಾರುತಿನಗರದಲ್ಲಿ ಅಪಾರ್ಟ್ ಮೆಂಟ್ ವೊಂದರಲ್ಲಿ ಈ ಘಟನೆ ನಡೆದಿದೆ. ಹೊಸೂರು ರಸ್ತೆಯಲ್ಲಿ ಹಾರ್ಡ್‌ವೇರ್ ಅಂಗಡಿ ನಡೆಸುತ್ತಿರುವ ಸೋಹನ್ ಲಾಲ್ ಕೆಲ ದಿನಗಳ ಹಿಂದೆಯಷ್ಟೇ ಸ್ವಂತ ಊರು ರಾಜಸ್ಥಾನಕ್ಕೆ ತೆರಳಿದ್ದಾರೆ. ಅವರ ಪತ್ನಿ ಜಾನಕಿ ಬಾಯಿ ಮನೆಯಲ್ಲಿ ಒಬ್ಬರೇ ಇದ್ದರು. ಗುರುವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಅಡುಗೆ ಸಿಲೆಂಡರ್ ಸಪ್ಲೈ ಮಾಡುವ ಹುಡುಗರಂತೆ ಇಬ್ಬರು ಬಂದು ಬಾಗಿಲು ಬಡಿದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸಿಲಿಂಡರ್
ಅಡುಗೆಮನೆಯಲ್ಲಿಟ್ಟ ಆಗಂತುಕರು ಸೋಹನ್ ಕುಮಾರ್ ಪತ್ನಿ ಬಾಯಿ ಅವರನ್ನು ಕೊಠಡಿಯಲ್ಲಿ ಕೂಡಿಹಾಕಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ.ರಾಜಸ್ಥಾನದಿಂದ ಸೋಹನ್‌ಕುಮಾರ್ ಬಂದ ನಂತರ ಕಳವು ಮಾಲಿನ ನಿಖರ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications