ದಿಬ್ಬಣದ ಬಸ್ ಗೆ ರೈಲು ಡಿಕ್ಕಿ: 37 ಮಂದಿ ಸಾವು
ಲಖ್ನೊ,
ಜುಲೈ 7: ಅಯ್ಯೊ ದುರ್ವಿಧಿಯೇ? ಮದುವೆ ಮುಗಿಸಿಕೊಂಡು ವಾಪಸಾಗುತ್ತಿದ್ದ ಬಸ್ಸಿನ ಮೇಲೆ ಛಾಪ್ರಾ-ಮಥುರಾ ಎಕ್ಸ್ ಪ್ರೆಸ್ ರೈಲು ಹರಿದು ಬಸ್ಸಿನಲ್ಲಿದ್ದ 80 ಮಂದಿ ಪೈಕಿ 37 ಮಂದಿ ಇಹಲೋಕ ವ್ಯಾಪಾರ ಮುಗಿಸಿದ್ದಾರೆ. ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. id="toptextpromo">ದೆಹಲಿಯಿಂದ
250 ಕಿ.ಮೀ. ದೂರದಲ್ಲಿ ಉತ್ತರಪ್ರದೇಶದ ಕಾನ್ಶಿರಾಮ್ ನಗರದ ಪಟಿಯಾಲಿ ಬಳಿ ಮಾನವ ರಹಿತ ರೈಲ್ವೆ ಲೆವೆಲ್ ಕ್ರಾಸಿಂಗ್ ನಲ್ಲಿ ಈ ದುರ್ಘಟನೆ ಗುರುವಾರ ಬೆಳಗಿನ ಜಾವ 2 ಗಂಟೆ ವೇಳೆ ನಡೆದಿದೆ. ಬಸ್ಸನ್ನು ರೈಲು 500 ಮೀಟರ್ ದೂರಕ್ಕೆ ಎಳೆದೊಯ್ದಿದೆ. id='are-slot-1' class='oiad oi-axt oiadv'> id='top-searched-articles'>ಬಸ್
ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಬಸ್ ಮೇಲೆಯೂ ಮಂದಿ ಕೂತಿದ್ದರು. ಅವರೆಲ್ಲ ಚೆಲ್ಲಾಪಿಲ್ಲಾಯಿ ಬಿದ್ದಿದ್ದರೆ, ಒಳಗಿದ್ದವರು ನಜ್ಜುಗುಜ್ಜಾಗಿದ್ದಾರೆ. ಮಸ್ ಮೇಲಿದ್ದವರು ರೈಲು ಬರುತ್ತಿರುವುದನ್ನು ದೂರದಿಂದಲೇ ಗಮನಿಸಿ, ಕೂಗಿಕೊಂಡರಾದರೂ ಅದು ಚಾಲಕನ ಕಿವಿಗೆ ಬೀಳೇ ಇಲ್ಲ.











Click it and Unblock the Notifications