ರೈಲ್ವೇ ಬುಕ್ಕಿಂಗ್ ಇನ್ನು ಸುಲಭ, ಬರಲಿದೆ ಹೊಸ ಇ ಟಿಕೇಟಿಂಗ್

IR Sample Ticket
ನವದೆಹಲಿ ಜು 6: ರೈಲು ಟಿಕೆಟ್ ಬುಕ್ ಮಾಡಿಸುವವರಿಗೆ ಐಆರ್‌ಸಿಟಿಸಿ ಎಂಬ ಆನ್‌ಲೈನ್ ತಾಣ ಚಿರಪರಿಚಿತ. ಆದರೆ, ಸದಾ ಸರ್ವರ್ ಎರರ್, ನಾಟ್ ಎಬಲ್ ಟು ಲಾಗ್ ಇನ್ ಮುಂತಾದ ಕಿರಿಕಿರಿಯೇ ಹೆಚ್ಚು.ಟಿಕೆಟ್ ಕಾಯ್ದಿರಿಸಲು ಹೆಣಗಾಡಿ ಟ್ರಾವೆಲ್ ಏಜೆಂಟ್ ಗಳ ಮೊರೆ ಹೋಗುವವರೇ ಹೆಚ್ಚು. ಈ ತೊಂದರೆ ತಪ್ಪಿಸಲು ಹೊಸ ಇ ಟಿಕೆಟಿಂಗ್ ವ್ಯವಸ್ಥೆಯನ್ನು ಭಾರತೀಯ ರೈಲ್ವೆ ಶೀಘ್ರದಲ್ಲೇ ಆರಂಭಿಸಲಿದೆ.

ತತ್ಕಾಲ್ ತೊಂದರೆ ಇನ್ನಿಲ್ಲ: ಬೆಳಿಗ್ಗೆ ಹೊತ್ತು ತತ್ಕಾಲ್ ಕೌಂಟರ್ ತೆರೆದಾಗ ಟಿಕೆಟ್ ಕಾಯ್ದಿರಿಸಲು ತೀರಾ ಹೆಣಗಾಡಬೇಕಿತ್ತು.ಹೊಸ ಪೋರ್ಟಲ್‌ನಲ್ಲಿ ಗ್ರಾಹಕರು ಮೊದಲೊಗೆ ತಮ್ಮ ಹೆಸರನ್ನು ನೋಂದಾಯಿಸಬೇಕು. ಇದಕ್ಕೆ ಯಾವುದೇ ಶುಲ್ಕ ಇಲ್ಲ. ಆದರೆ, ಆರಂಭದಲ್ಲಿ ತಿಂಗಳಿಗೆ ಒಬ್ಬ ಬಳಕೆದಾರರಿಗೆ (ಯೂಸರ್ ಐಡಿ) 8 ಬಾರಿ ಮಾತ್ರ ವ್ಯವಹಾರ ಮಾಡಲು ಅವಕಾಶ ನೀಡಲಾಗುತ್ತದೆ

ಸೇವಾ ಶುಲ್ಕ ಕಡಿಮೆ: ಐಆರ್‌ಸಿಟಿಸಿಗಿಂತ ಕಡಿಮೆ ಸೇವಾ ಶುಲ್ಕವನ್ನು ವಿಧಿಸಲಾಗಿದೆ. ಐಆರ್‌ಸಿಟಿಸಿಯಲ್ಲಿ ಒಂದು ಸ್ಲೀಪರ್ ಟಿಕೆಟಿಗೆ 10 ರೂ., ಮೇಲ್ದರ್ಜೆಯ ಟಿಕೆಟುಗಳಿಗೆ 20 ರೂ. ಸೇವಾಶುಲ್ಕವಿದ್ದರೆ, ಈ ಹೊಸ ತಾಣದಲ್ಲಿ ಸ್ಲೀಪರ್‌ಗೆ 5 ರೂ. ಮಾತ್ರ. ಉಳಿದ ಮೇಲ್ದರ್ಜೆ ಟಿಕೆಟುಗಳಿಗೆ 10 ರೂ. ಇರುತ್ತದೆ. ಹಣಪಾವತಿ ವ್ಯವಸ್ಥೆಗೆ ಅಂಗೀಕಾರ ದೊರೆತ ತಕ್ಷಣವೇ ಹೊಸ ಅಂತರ್ಜಾಲ ತಾಣದ ವಿವರಗಳನ್ನು indianrailways.gov.in ತಾಣದಲ್ಲಿ ಘೋಷಿಸಲಾಗುತ್ತದೆ.

ಪ್ರತಿ ದಿನ ಮಧ್ಯರಾತ್ರಿ 12.30ಕ್ಕೆ ತೆರೆಯುತ್ತದೆ, ಬಳಿಕ ರಾತ್ರಿ 11.30ಕ್ಕೆ ಮುಚುತ್ತದೆ. ಮೊಬೈಲ್ ಫೋನುಗಳಲ್ಲಿಯೂ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ. ಈ ಹೊಸ ವ್ಯವಸ್ಥೆಯಿಂದ ನಕಲಿ ಟಿಕೆಟ್ ಕೊರತೆ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಟಿಕೆಟ್ ಮಾರುತ್ತಿದ್ದ ಏಜೆಂಟರುಗಳಿಗೆ ಕಡಿವಾಣ ಬೀಳಲಿದೆ ಎಂದು ರೈಲ್ವೇ ಅಧಿಕಾರಿಯೊಬ್ಬರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+