ಬೆಂಗಳೂರಿನಲ್ಲಿ ದುರ್ಘಟನೆ : ಐವರು ಕಾರ್ಮಿಕರ ಸಾವು

Tragedy in construction site in Bangalore
ಬೆಂಗಳೂರು, ಜು. 01 : ಡಿಎಲ್ಎಫ್ ಕಟ್ಟಡ ನಿರ್ಮಾಣ ಕಂಪನಿ ನಿರ್ಮಿಸುತ್ತಿದ್ದ ಬೃಹತ್ ವಸತಿ ಸಮುಚ್ಚಯದಲ್ಲಿ ಕ್ರೇನ್ 120 ಅಡಿಗಳಿಂದ ಬಿದ್ದಕಾರಣ ಐವರು ಕಾರ್ಮಿಕರು ಮರಣಕ್ಕೀಡಾದ ದುರ್ಘಟನೆ ಮಂಗಳವಾರ ಸಂಜೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ಬನ್ನೇರುಘಟ್ಟ ರಸ್ತೆ ಬಳಿಯಿರುವ ಬೇಗೂರಿನ ಅಕ್ಷಯನಗರದಲ್ಲಿ ಡಿಎಲ್ಎಫ್ ವೆಸ್ಟೆಂಡ್ ಹೈಟ್ಸ್ ನ್ಯೂ ಟೌನ್ ಅಪಾರ್ಟ್ ಮೆಂಟಿನಲ್ಲಿ ಈ ಅಪಘಾತ ಸಂಭವಿಸಿದೆ. ಸತ್ತವರಲ್ಲಿ ಅವತಾರ್ ಸಿಂಗ್, ಬಲ್ಜಿತ್ ಸಿಂಗ್, ವಿಕ್ರಮ್ ಸಿಂಗ್ ಪಂಜಾಬ್ ದವರು, ಶ್ರೀಕಾಂತ್ ಮಹಾರಾಷ್ಟ್ರದವರಾದರೆ, ಅಮರನಾಥ್ ಬಿಹಾರದವನು ಎಂದು ಗುರುತಿಸಲಾಗಿದೆ. ಪ್ರವೀಣ್ ಭೋಂಸ್ಲೆ ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಆತನ ಸ್ಥಿತಿ ಕೂಡ ಚಿಂತಾಜನಕವಾಗಿದೆ.

ಈ ಸಮುಚ್ಚಯದಲ್ಲಿ ಒಟ್ಟು 5,000 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಒಟ್ಟು 2,000 ಕಾರ್ಮಿಕರು ನಿರ್ಮಾಣದಲ್ಲಿ ನಿರತರಾಗಿದ್ದಾರೆ. ಸತ್ತವರೆಲ್ಲ ಎಸ್ಎಎಮ್ಎಸ್ ಫೆಸಿಲಿಟೀಸ್ ಮ್ಯಾನೇಜ್ ಮೆಂಟ್ ಸಂಸ್ಥೆಯ ಕೆಲಸಗಾರರು. ಸತ್ತವರಲ್ಲಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟರೆ ಒಬ್ಬ ಆಸ್ಪತ್ರೆಗೆ ಸಾಗಿಸುವಾಗ ಅಸುನೀಗಿದ್ದಾನೆ.

ಇಷ್ಟೊಂದು ಬೃಹತ್ ಪ್ರಮಾಣದ ನಿರ್ಮಾಣ ನಡೆಯುತ್ತಿದ್ದರೂ ಒಂದು ಆಂಬುಲನ್ಸ್ ಕೂಡ ಸ್ಥಳದಲ್ಲಿ ಇದ್ದಿರಲಿಲ್ಲ ಎಂದು ಸ್ಥಳಕ್ಕೆ ಆಗಮಿಸಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದ್ದಾರೆ. ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಸಮಿತಿ, ಡಿಎಲ್ಎಫ್ ಸಂಸ್ಥೆ ಕಾರ್ಮಿಕರಿಗೆ ನೀಡಬೇಕಾಗಿದ್ದ ರಕ್ಷಣಾ ನಿಯಮಗಳನ್ನು ಪಾಲಿಸಿಲ್ಲ ಎಂದು ಪೊಲೀಸರಿಗೆ ದೂರು ನೀಡಿದೆ.

ಪರಿಹಾರ : ಕಟ್ಟಡ ನಿರ್ಮಿಸುತ್ತಿರುವ ಡಿಎಲ್ಎಫ್ ಸದರ್ನ್ ಹೋಮ್ಸ್ ಪ್ರೈ.ಲಿ. ಸತ್ತವರ ಕುಟುಂಬಕ್ಕೆ 5 ಲಕ್ಷ ರು. ಮತ್ತು ಗಾಯಗೊಂಡ ಭೋಂಸ್ಲೆಗೆ 2.5 ಲಕ್ಷ ರು. ನೀಡುವುದಾಗಿ ಹೇಳಿದೆ. ಭೋಂಸ್ಲೆಯ ಎಲ್ಲ ಆಸ್ಪತ್ರೆಯ ಖರ್ಚುಗಳನ್ನು ಕೂಡ ಭರಿಸುವುದಾಗಿ ಡಿಎಲ್ಎಫ್ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+