ಆನ್‌ಲೈನ್ ಮೂಲಕ ಪಡಿತರ ಚೀಟಿ: ಶೋಭಾ ಕರಂದ್ಲಾಜೆ
ಬೆಂಗಳೂರು,
ಜುಲೈ 1: ಬಡತನ ರೇಖೆಗಿಂತ ಮೇಲಿನ ಮಟ್ಟದಲ್ಲಿ ಇರುವ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಪಡಿತರ ಚೀಟಿಯನ್ನು ಆನ್‌ಲೈನ್ ಮೂಲಕ ವಿತರಿಸುವ ವ್ಯವಸ್ಥೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದು ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. id="toptextpromo">ಈ
ವ್ಯವಸ್ಥೆಯ ಅಡಿ ಅರ್ಜಿದಾರರು ತಮ್ಮ ಕಂದಾಯ ದಾಖಲೆ ಹಾಗೂ ವಿದ್ಯುತ್ ಸಂಖ್ಯೆ ಸೇರಿದಂತೆ ಇತರ ಮಾಹಿತಿಗಳನ್ನು ಆನ್‌ಲೈನ್ ಮೂಲಕ ನಮೂದು ಮಾಡಿ ಪಡಿತರ ಚೀಟಿಗೆ ಹೆಸರು ನಮೂದು ಮಾಡಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>'ರಾಜ್ಯದಲ್ಲಿ
ಸುಮಾರು 1.15 ಕೋಟಿ ಕುಟುಂಬಗಳು ಪಡಿತರ ಚೀಟಿ ಪಡೆಯಲು ಅರ್ಹರು. ಆದರೆ ಇಲ್ಲಿಯವರೆಗೆ ಸುಮಾರು 1.75 ಚೀಟಿಗಳು ವಿತರಣೆಯಾಗಿವೆ. ಇದರ ಅರ್ಥ ಸುಮಾರು 60 ಲಕ್ಷ ಜನರು ಅಕ್ರಮವಾಗಿ ಇದನ್ನು ಪಡೆದುಕೊಂಡಿದ್ದಾರೆ' ಎಂದು ಅವರು ಅಂಕಿ-ಅಂಶ ನೀಡಿದರು.











Click it and Unblock the Notifications