ಕೆಆರ್‌ಎಸ್ ನೀರಿನ ಮಟ್ಟ 100 ಅಡಿ, ರೈತ ಖುಷಿ

KRS Dam, Mysore
ಮೈಸೂರು, ಜು 1: ಕೊಡಗಿನಲ್ಲಿ ಉತ್ತಮವಾಗಿ ಮಳೆ ಸುರಿದ ಕಾರಣ ಕಾವೇರಿ ನದಿನೀರಿನ ಪ್ರಮಾಣವೂ ಹೆಚ್ಚಾಗಿ ಕೆಆರ್‌ಎಸ್ ಜಲಾಶಯ ಈ ಬಾರಿ ಬಹುಬೇಗ ಭರ್ತಿಯಾಗುವ ನಿರೀಕ್ಷೆ ಮೂಡಿದ್ದು, ರೈತರು ಸಂತಸಗೊಂಡಿದ್ದಾರೆ.

ಈಗಾಗಲೇ ಜಲಾಶಯದ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, 124 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 100.35 ಅಡಿಯಷ್ಟು ನೀರಿದೆ. ಅಲ್ಲದೆ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ 11892 ಕ್ಯೂಸೆಕ್ಸ್‌ನಷ್ಟಿದೆ. ಕೊಡಗಿನಲ್ಲಿ ಒಂದೆರಡು ದಿನಗಳಿಂದ ಮಳೆ ಬಿಡುವು ನೀಡಿರುವುದರಿಂದ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿದೆ.

ಆದರೂ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯೇ ಜೂನ್‌ನಲ್ಲಿ ಜಲಾಶಯದ ನೀರಿನ ಮಟ್ಟ ನೂರು ಅಡಿಯನ್ನು ದಾಟಿರುವುದಾಗಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ 87.78 ಅಡಿಯಷ್ಟಿತ್ತು. ಅಲ್ಲದೆ ಒಳಹರಿವು ಕೂಡ ಕಡಿಮೆಯಿತ್ತು ಹೀಗಾಗಿ ಅಕ್ಟೋಬರ್ ತಿಂಗಳಲ್ಲಿ ಜಲಾಶಯ ಭರ್ತಿಯಾಗಿತ್ತು.

ಕೊಡಗಿನಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದೇ ಆದರೆ ಜುಲೈ ತಿಂಗಳಲ್ಲೇ ಕೆಆರ್‌ಎಸ್ ಜಲಾಶಯ ಭರ್ತಿಯಾಗುವುದರಲ್ಲಿ ಸಂಶಯವಿಲ್ಲ. ಕೊಡಗಿನ ಹಾರಂಗಿ ಜಲಾಶಯ ಕೂಡ ಭರ್ತಿಯಾಗಲು ಕೆಲವೇ ಅಡಿ ಬಾಕಿಯಿದೆ. ಅದು ಭರ್ತಿಯಾದದ್ದೇ ಆದರೆ ಹೆಚ್ಚಿನ ನೀರು ಕೆಆರ್‌ಎಸ್‌ಗೆ ಹರಿದು ಬರಲಿದೆ.

ಜೂನ್ ಮೊದಲ ದಿನದಿಂದಲೇ ಆರಂಭಗೊಂಡ ಮಳೆ ಬಿಡುವು ನೀಡದೆ ಸುರಿದಿತ್ತಾದರೂ ಮಧ್ಯೆ ಕೆಲವುದಿನಗಳ ಬಿಡುವು ನೀಡಿದ್ದರಿಂದಾಗಿ ಕಾವೇರಿ ನದಿ ನೀರಿನ ಹರಿಯುವಿಕೆಯ ಪ್ರಮಾಣವೂ ಕಡಿಮೆಯಾಗಿದೆ. ಆದರೆ ಮುಂದಿನ ದಿನದಲ್ಲಿ ಕೊಡಗಿನಲ್ಲಿ ಮುಂಗಾರು ಚುರುಕಾಗುವ ಲಕ್ಷಣ ಕಂಡು ಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+