ಯುವಕನ ತಲೆ ಅಪ್ಪಚ್ಚಿ ಮಾಡಿದ ಕಿಲ್ಲರ್ ಬಿಎಂಟಿಸಿ ಬಸ್
ಬೆಂಗಳೂರು
ಜೂ 30: ಕಿಲ್ಲರ್ ಬಿಎಂಟಿಸಿ ಎಂಬ ಹಣೆಪಟ್ಟಿ ಹೊತ್ತಿರುವ ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ಸಂಸ್ಥೆ ವಾಹನಕ್ಕೆ ಮತ್ತೊಬ್ಬ ಪಾದಚಾರಿ ಬಲಿಯಾಗಿದ್ದಾನೆ. ಬಸ್ ಹಾಗೂ ಗೋಡೆಯ ಮಧ್ಯೆ ಸಿಕ್ಕಿ ಧಾರವಾಡ ಮೂಲದ ರಾಮನಗೌಡ ಬೆಳವಾಡಿ (26) ಮೃತಪಟ್ಟ ಘಟನೆ ಯಶವಂತಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. id="toptextpromo">ಕದಿರೇನಹಳ್ಳಿ
ಪದ್ಮನಾಭನಗರ ನಿವಾಸಿ ರಾಮನಗೌಡ ಬೆಂಗಳೂರಿಗೆ ಬಂದು ಮೂರು ತಿಂಗಳಷ್ಟೇ ಆಗಿದೆ. ಇಂದಿರಾನಗರ ಬಳಿ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಬುಧವಾರ ಬೆಳಗ್ಗೆ ಚಿಕ್ಕಬಾಣವಾರಕ್ಕೆ ತೆರಳಲು ಯಶವಂತಪುರ ಬಸ್ ನಿಲ್ದಾಣಕ್ಕೆ ಬಂದಿದ್ದ ರಾಮನಗೌಡ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಟಿಟಿಎಂಸಿ ನಿಲ್ದಾಣದಿಂದ ಹೊರ ಬಂದ ಬಸ್ (401 B)ತಿರುವು ತೆಗೆದುಕೊಳ್ಳುತ್ತಿದ್ದಾಗ ಗೋಡೆ ಮತ್ತು ಬಸ್ ನಡುವೆ ಸಿಲುಕಿ ಗಂಭೀರ ಗಾಯಗೊಂಡರು. ತಕ್ಷಣ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಚಾಲಕನ
ಅಜಾಗರೂಕತೆಯೇ ಕಾರಣ, ಮೃತ ವ್ಯಕ್ತಿಯ ತಲೆ ಅಪ್ಪಚ್ಚಿಯಾಗಿತ್ತು, ಕಿವಿಗೆ ಹಾಕಿದ್ದ ಇಯರ್ ಫೋನ್ ಗಳು ಜಜ್ಜಿ ಹೋಗಿದ್ದವು. ನೋಡಲು ಭಯವಾಗುವಂತಿತ್ತು ಆ ದೃಶ್ಯ ಎಂದು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರಾಮನಗೌಡ ಹಿಂದೆ ಬರುತ್ತಿದ್ದ ಪೂಜಾ(28) ಎಂಬ ಮಹಿಳೆಯ ಕಾಲು ಮುರಿದಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಮತ್ತಿಕೆರೆ ನಿವಾಸಿಯಾದ ಪೂಜಾ, ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಎಂಟಿಸಿ ಬಸ್ ಚಾಲಕ ಕುಮಾರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.











Click it and Unblock the Notifications