ಹಾಸನ: ಒಬ್ಬ ಕಾಣೆ, ನಾಲ್ಕು ಕಳುವು, ಒಬ್ಬ ಸಾವು

Hassan district crime cases this week
ಹಾಸನ ಜೂ 29: ಯುವಕ ಕಾಣೆ: ಜೂ 23ರಂದು ಬೆಳಗ್ಗೆ 6 ಘಂಟೆಯ ಸಮಯದಲ್ಲಿ ಹಾಸನ ನಗರ ಬೀರನಳ್ಳಿಕೆರೆಯ ವಾಸಿ ಗಿರೀಶ್ ಮಾರ್ಕ್ಸ್ ಕಾಡ್ ತರಲು ಮೈಸೂರಿಗೆ ಹೋಗಿದ್ದು ವಾಪಸ್ಸು ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರು ಪತ್ತೆಯಾಗಿರುವುದಿಲ್ಲ ಎಂದು ಜೂ 27ರಂದು ಮಂಜುನಾಧರವರು ದೂರು ಕೊಟ್ಟಿರುತ್ತಾರೆ. ಚಹರೆ: ಗಿರೀಶ 26 ವರ್ಷ, 5"7 ಎತ್ತರ, ದುಂಡು ಮುಖ, ಎಣ್ಣೆಗೆಂಪು ಬಣ್ಣ, ಮಾಸಲು ಬಣ್ಣದ ಷರಟು ಗುಲಾಬಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ, ಕನ್ನಡ ಬಾಷೆ ಮಾತನಾಡುತ್ತಾನೆ.
***
ಕೊಳವೆ ಬಾವಿಯ ಪ್ರಿವೆಂಟರ್ ಕಳವು : ಜೂ.26ರಂದು ಅರಸಿಕೇರೆ ತಾಲ್ಲೂಕು ಗಂಡಸಿ ಹೋಬಳಿ ಅಲದಹಳ್ಳಿ ಗ್ರಾಮದ ದೇವರಾಜೇಗೌಡರು ತಮ್ಮ ಬಾಬ್ತು ಜಮೀನುಲ್ಲಿ ಕೊಳವೆ ಬಾವಿಗೆ ಅಳವಡಿಸಿದ್ದ ಸುಮಾರು 7,000/ ರೂ ಬೆಲೆಯ ಪ್ರಿವೆಂಟರ್, ಆಟೋ ಸ್ಟಾಟ್ರ್, ಫೀಜುಗಳು, ಮೀಟರ್ ಪ್ಲೇವುಡ್ ನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿದ್ದಾರೆ. ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ.
***
ಮನೆ ಬೀಗ ಮುರಿದು ಕಳವು : ಜೂ.26ರಂದು ಹಾಸನ ನಗರದ 2ನೇ ಕ್ರಾಸ್ ಕುಂಬಾರ ಬೀದಿಯ ವಾಸಿ ರಂಗಸ್ವಾಮಿರವರು ಸಂಸಾರದೊಂದಿಗೆ ಸ್ವಂತ ಕೆಲಸದ ನೀಮಿತ್ತ ವಿಜಾಪುರಕ್ಕೆ ಹೋಗಿರುತ್ತಾರೆ. ಜೂ 27ರಂದು ಬೆಳಗ್ಗೆ ಬಂದು ನೋಡಲಾಗಿ ಬೀರುವಿನ ಲಾಕರ್ ನ್ನು ಯಾವುದೋ ರಾಡಿನಿಂದ ಮೀಟಿ ಬೀರುವಿನಲ್ಲಿದ್ದ 55,000/- ರೂ ಹಣ, 3 ಚಿಕ್ಕ ಚಿನ್ನದ ಉಂಗುರ 13 ಗ್ರಾಂ,ಲೋಲಾಕ 4 ಗ್ರಾಂ, ಚಿನ್ನದ ಹ್ಯಾಂಗಿಂಗ್ಸ್ 8 ಗ್ರಾಂ, ಬೆಳ್ಳಿಯ ಉಡಿದಾರ, ಕಾಲುಬಳೆ ಗ್ಯಾಸ್ ಸಪ್ಲೆಯರ್ ಪುಸ್ತಕ, ಸೈಟಿನ ರೆಕಾರ್ಡ್ಸ, ಒಟ್ಟು ಬೇಲೆ 79,200 ರೂ ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ರಂಗಸ್ವಾಮಿರವರು ದಿನಾಂಕ ಜೂ27 ಕೊಟ್ಟ ದೊರಿನ ಮೇರೆಗೆ ಹಾಸನ ಪೆನಷನ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
***
ಬೈಕ್ ಕಳವು: ಜೂ.25ರಂದು 3.30 ಸಮಯದಲ್ಲಿ ಹಾಸನ ಕುವೆಂಪು ನಗರ ಪ್ರಭಾಕರ್ ಬಿ.ಶೆಟ್ಟಿರವರು ತಮ್ಮ ಬಾಬ್ತು ಕೆ.ಎ-13-ಜೆ-8973 ರ ಹೀರೊ ಹೊಂಡಾ ಸ್ಲೆಂಡರ್ ಬೈಕ್‌ನ್ನು ಮಲೆನಾಡು ನರ್ಸಿಂಗ್ ಹೋಂ ಹತ್ತಿರ ಒಳಗಡೆ ಬೈಕ್ ನಿಲ್ಲಿಸಿ ಒಳಗಡೆ ಹೋಗಿ ವಾಪಸ್ಸು ಬಂದು ನೋಡಲಾಗಿ 13,000/ ಬೆಲೆಯ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.> ಪ್ರಭಾಕರ್ ಬಿ.ಶೆಟ್ಟಿರವರು ಜೂ.28 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಪೊಲೀಸ್ ಠಾಣೇಯಲ್ಲಿ ಪ್ರಕರಣ ದಾಖಲಿಸಿರುತ್ತೆ.
***
ಬೈಕ್ ಕಳವು: ಜೂ.27ರಂದು ಸಂಜೆ 8 ಗಂಟೆ ಸಮಯದಲ್ಲಿ ಹಾಸನ ಕುವೆಂಪು ನಗರದ ರಾಷ್ಟ್ರಪತಿರವರು ತಮ್ಮ ಬಾಬ್ತು ಕೆ.ಎ-13-ಕೆ-2318 ಹೀರೋ ಹೊಂಡಾಸ್ಲೆಂಡರ್ ಬೈಕ್‌ನ್ನು ಜೆಡಿ(ಎಸ್) ಕಛೇರಿ ಹತ್ತಿರ ನಿಲ್ಲಿಸಿ ಒಳಗಡೆ ಹೋಗಿ ವಾಪಸ್ಸು ಬಂದು ನೋಡಲಾಗಿ 15000/- ಬೆಲೆಯ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ರಾಷ್ಟ್ರಪತಿರವರು ಜೂ 28 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿರುತ್ತೆ
***
ಟ್ರ್ಯಾಕ್ಟರ್ ಡಿಕ್ಕಿ ವ್ಯಕ್ತಿ ಸಾವು : ಜೂ 27 ರಂದು ಬೆಳಿಗ್ಗೆ 10 ಗಂಟೆಯ ಸಮಯದಲ್ಲಿ ಜಾವಗಲ್ ಆರಕೇರಿ ಎರಿಯ ಹತ್ತಿರ ಯೊಗೀಶರವರು ನಡೆದುಕೊಂಡು ಹೋಗುತ್ತಿರುವಾಗ ಕೆಎ-13-ಟಿಎ-3709ರ ಟ್ರಾಕ್ಟರ್ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿಮಾಡಿದ ಪರಿಣಾಮ ಕಾಚಿಘಟ್ಟಗ್ರಾಮದ ಯೋಗೀ ಬಿನ್ ತಿಮ್ಮಬೋವಿ(18) ರವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದರಿಂದ ಅರಸಿಕೇರೆ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿ ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟಿರುತ್ತಾನೆ ಎಂದು ದೇವರಾಜುರವರು ಕೊಟ್ಟದೂರಿನ ಮೇರೆಗೆ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಟ್ರ್ಯಾಕ್ಟರನ್ನು ಅಮಾನತ್ತು ಪಡಿಸಿಕೊಂಡು ಚಾಲಕನ ಪತ್ತೆಗಾಗಿ ಕ್ರಮ ಕೈಗೊಂಡಿರುತ್ತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+