• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊಬೈಲ್ ಹ್ಯಾಂಡ್ ಸೆಟ್ :ನೋಕಿಯಾ ನಂ 1, ಸ್ಯಾಮ್ ಸಂಗ್ 2

By * ಇಂದ್ರೇಶ್
|
ನವದೆಹಲಿ, ಜೂ 27: ದೇಶದ ಮೊಬೈಲ್ ಹ್ಯಾಂಡ್ ಸೆಟ್ ಮಾರುಕಟ್ಟೆ 2010-11ರಲ್ಲಿ ಶೇ15 ರಷ್ಟು ಬೆಳವಣಿಗೆ ದಾಖಲಿಸಿದ್ದು ಒಟ್ಟು ಮಾರುಕಟ್ಟೆ 33,171ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ವರದಿಯೊಂದು ಹೇಳಿದೆ.

ಟೆಲಿಕಾಂ ಉದ್ಯಮದ ಪತ್ರಿಕೆ ವಾಯ್ಸ್ ಅಂಡ್ ಡಾಟಾ ಪ್ರಕಾರ ಮೊಬೈಲ್ ಮಾರುಕಟ್ಟೆ 33,171 ಕೋಟಿ ರೂಪಾಯಿಗಳಿಗೆ ಹಿಗ್ಗಿದ್ದು, ಹಿಂದಿನ ವರ್ಷ 28,897 ಕೋಟಿ ರೂಪಾಯಿಗಳಾಗಿತ್ತು. ಮೊಬೈಲ್ ಮಾರುಕಟ್ಟೆಯಲ್ಲಿ ನೋಕಿಯಾ ಹಾಗೂ ಸ್ಯಾಮ್ಸ್ಂಗ್ ಹೆಚ್ಚಿನ ಆದಾಯ ಗಳಿಕೆ ಮಾಡಿವೆ.

ನೋಕಿಯಾ ತನ್ನ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡಿದ್ದು 12,929 ಕೋಟಿ ರೂಪಾಯಿ ಆದಾಯ ಗಳಿಸಿದ್ದು, ಹಿಂದಿನ ವರ್ಷ 12,900 ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಕಡಿಮೆ ಬೆಲೆಯ ಮೊಬೈಲ್ ಹ್ಯಾಂಡ್ ಸೆಟ್ ಗಳ ಮಾರುಕಟ್ಟೆಯಲ್ಲಿ ನೋಕಿಯಾಗೆ ದೇಶೀ ಕಂಪೆನಿಗಳಾದ ಮೈಕ್ರೋ ಮ್ಯಾಕ್ಸ್, ಕಾರ್ಬನ್ ಹಾಗೂ ಸ್ಪೈಸ್ ಗಳು ತೀವ್ರ ಪೈಪೋಟಿ ನೀಡುತ್ತಿದೆ.

ದುಬಾರಿ ಹ್ಯಾಂಡ್ ಸೆಟ್ ಗಳಲ್ಲಿ ಸ್ಯಾಮ್ಸಂಗ್, ಬ್ಲಾಕ್ ಬೆರ್ರಿ ಹಾಗೂ ಹೆಚ್‌ಟಿಸಿ ಹ್ಯಾಂಡ್ ಸೆಟ್ ಗಳು ಪೈಪೋಟಿ ನೀಡುತ್ತಿವೆ ಎಂದೂ ವರದಿ ಹೇಳಿದೆ. ನೋಕಿಯಾದ ಮಾರುಕಟ್ಟೆ ಹಿನ್ನಡೆಗೆ ಎರಡು ಸಿಮ್ ಗಳ ಹ್ಯಾಂಡ್ ಸೆಟ್ ಗಳ ತಯಾರಿಕೆ ಕಡಿಮೆ ಮಾಡಿರುವದೇ ಕಾರಣ ಎಂದು ಹೇಳಲಾಗಿದೆ.

ದೇಶದಲ್ಲಿ ಎರಡು ಸಿಮ್ ಗಳ ಹ್ಯಾಂಡ್ ಸೆಟ್ ಗಳು ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ನೋಕಿಯಾ ದೇಶದ ಮಾರುಕಟ್ಟೆಯಲ್ಲಿ ಶೇ39 ಪಾಲು ಹೊಂದಿದ್ದು ಸ್ಯಾಮ್ಸ್ಂಗ್ ಶೇ 17.2 ರಷ್ಟು ಪಾಲು ಹೊಂದಿದ್ದು 5720 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದೆ. ಸ್ಯಾಮ್ಸ್ಂಗ್ ಮಾರಾಟದಲ್ಲಿ ಶೇ 17 ರಷ್ಟು ಏರಿಕೆ ದಾಖಲಿಸಿದ್ದು ತನ್ನ ಹ್ಯಾಂಡ್ ಸೆಟ್ ಗಳಲ್ಲಿ ಜನಪ್ರಿಯ ಆಪರೇಟಿಂಗ್ ಸಿಸ್ಟಂ ಗಳಾದ ವಿಂಡೋಸ್, ಅಂಡ್ರಾಯ್ಡ್, ಮತ್ತು ಬಡ ವನ್ನು ಅಳವಡಿಸಿದೆ.

ದೇಶೀ ಕಂಪೆನಿ ಮೊಬೈಲ್ ಮಾರುಕಟ್ಟೆಯಲ್ಲಿ ಮೈಕ್ರೋ ಮ್ಯಾಕ್ಸ್ ಮೂರನೇ ಸ್ಥಾನ ಪಡೆದಿದ್ದು ವಾರ್ಷಿಕ ಶೇ 43 ರಷ್ಟು ಬೆಳವಣಿಗೆ ದಾಖಲಿಸಿದ್ದು 2289 ಕೋಟಿ ರೂಪಾಯಿಗಳ ಆದಾಯ ಗಳಿಸಿದೆ. ಇದು ಶೇ 6.9 ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಕೆನಡಾದ ಕಂಪೆನಿ ರೀಸರ್ಚ್ ಇನ್ ಮೋಷನ್ ನ ಬ್ಲಾಕ್ ಬೆರ್ರಿ ಹಾಗೂ ಎಲ್‌ಜಿ ನಾಲ್ಕು ಹಾಗೂ ಐದನೇಯ ಸ್ಥಾನದಲ್ಲಿದ್ದು ಕ್ರಮವಾಗಿ ರೂ 1950 ಹಾಗೂ 1210 ಕೋಟಿ ರೂಪಾಯಿಗಳ ಮಾರಾಟವನ್ನು ಹೊಂದಿವೆ.

ಬ್ಲಾಕ್ ಬೆರ್ರಿ ಶೇ 5.9 ಹಾಗೂ ಎಲ್‌ಜಿ ಶೇ5.5 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿವೆ ಎಂದು ವರದಿ ತಿಳಿಸಿದೆ. ಜಿ ಫೈವ್ ಶೇ 4 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು ಶೇ ೭೫ ರಷ್ಟು ಆದಾಯ ವೃದ್ದಿಸಿಕೊಂಡಿದ್ದು ಸ್ಪೈಸ್ ನ ಆದಾಯದಲ್ಲಿ ಶೆ 11.5 ರಷ್ಟು ಕುಸಿತ ದಾಖಲಾಗಿದೆ. ಜಿಫೈವ್ 1326 ಕೋಟಿ, ಕಾರ್ಬನ್ 1004 ಕೋಟಿ, ಸ್ಪೈಸ್ 920 ಕೋಟಿ, ಮ್ಯಾಕ್ಸ್ 745 ಕೋಟಿ ಹಾಗೂ ಸೋನಿ ಎರಿಕ್ಸನ್ 690 ಕೋಟಿ ರೂಪಾಯಿಗಳ ಆದಾಯ ಹೊಂದಿವೆ, ಇತರ ಭಾರತೀಯ ಬ್ರಾಂಡ್ ಗಳಾದ ಲವ, ಇಂಟೆಕ್ಸ್, ಝೆನ್ ಮೊಬೈಲ್ ಗಳು ಯಥಾಸ್ಥಿತಿಯ ಬೆಳವಣಿಗೆ ದಾಖಲಿಸಿವೆ ಎಂದೂ ವರದಿ ಹೇಳಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
According to telecom industry journal Voice&Data report The Indian mobile handset market grew by 15% to a whopping Rs 33,171 crore in FY11, with Nokia and Samsung emerging as top revenue earners

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more