ಜೂನ್ 27ರಂದು ಧರ್ಮಸ್ಥಳದಲ್ಲಿ 800 ಪೊಲೀಸರು!

ಯಾಕೆಂದರೆ ಹೇಳಿ ಕೇಳಿ ರಾಜಕಾರಣಿಗಳು ಯಾವ ಕ್ಷಣದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಯಾರಿಗೆ ಗೊತ್ತು ಎನ್ನುವುದು ಒಂದು ಸಂಗತಿಯಾದರೆ, ಯಡಿಯೂರಪ್ಪ ಅವರನ್ನು ಹಿಂಬಾಲಿಸಿ ಸಚಿವ ಸಂಪುಟದ ಡಜನ್ ಮಂತ್ರಿಗಳು ಬರುವುದರಿಂದ ಯಾವ ಸಚಿವರ ಮೂಡ್ ಹೇಗಿರುತ್ತದೋ? ಎನ್ನುವ ಭೀತಿಯಿಂದ.
ಆಕಸ್ಮಿಕವಾಗಿ ಸೇರಬಹುದಾದ ಭಾರೀ ಸಂಖ್ಯೆಯ ಕುತೂಹಲಿಗರಿಂದಾಗಿ ಒಂದು ಕೈ ನೋಡಿಯೇ ಬಿಡುವ ಎನ್ನುವ ಕಾರಣಕ್ಕೆ ಇಬ್ಬರೂ ಆಣೆ-ಪ್ರಮಾಣಕ್ಕೆ ಮುಂದಾಗಿಬಿಟ್ಟರೆ, ಬೆಂಬಲಿಗರು ದಾಂಧಲೆಗೆ ಶುರುವಿಟ್ಟುಕೊಂಡರೇ? ಇಂಥ ಎಲ್ಲ ಸಾಧ್ಯತೆಗಳನ್ನು ಅಧಿಕಾರಿಮಟ್ಟದಲ್ಲಿ ಅಳೆದು-ತೂಗಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಲ ನಿಯೋಜಿಸಲು ನಿರ್ಧರಿಸಿದ್ದಾರಂತೆ.
ಈಗಾಗಲೇ ವರದಿಯಾಗಿರುವಂತೆ ಜೂನ್ 27ರಂದು ಯಡಿಯೂರಪ್ಪ ಅವರು ಧರ್ಮಸ್ಥಳಕ್ಕೆ ಬಂದು ಪೂಜೆ ಮಾಡಿಸುತ್ತಾರಂತೆ. ಹಾಗೆಯೇ ಕುಮಾರಸ್ವಾಮಿಯವರೂ ಕೂಡಾ ಅದೇ ದಿನ ಧರ್ಮಸ್ಥಳಕ್ಕೆ ಬಂದು ಮಂಜುನಾಥ ಸ್ವಾಮಿಗೆ ಪೂಜೆ ಸಲ್ಲಿಸಿ ತೆರಳುತ್ತಾರಂತೆ. ತಾನು ಹೇಳಬೇಕೆಂದಿದ್ದುದನ್ನು ಪತ್ರದಲ್ಲಿ ಬರೆದು ದೇವರ ಮುಂದೆ ಇಟ್ಟು ಪೂಜೆ ಮಾಡುವುದಾಗಿಯೂ ಕುಮಾರಸ್ವಾಮಿ ಹೇಳಿದ್ದಾರೆ. ಆದ್ದರಿಂದ ಜೂ. 27ರಂದು ಧರ್ಮಸ್ಥಳಕ್ಕೆ ಅವರಿಬ್ಬರೂ ಕಾಲಿಟ್ಟಮೇಲೆ ಅದೆಂಥ ನಿರ್ಧಾರ ತೆಗೆದುಕೊಳ್ಳುತಾರೋ ಆ ಮಂಜುನಾಥನಿಗೇ ಗೊತ್ತು. ಆದ್ದರಿಂದಲೇ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ.












Click it and Unblock the Notifications