ಎಚ್ ಡಿ ಕುಮಾರಸ್ವಾಮಿ ಧರ್ಮಸ್ಥಳ ಕಾರ್ಯಕ್ರಮ ಪ್ರಕಟ
ರಾಮನಗರ
ಜೂ 24: ಧರ್ಮಸ್ಥಳ ಶ್ರೀಕ್ಷೇತ್ರಕ್ಕೆ ಹೋಗುವುದನ್ನು ಎಚ್ ಡಿ ಕುಮಾರಸ್ವಾಮಿ ಇಂದು ಖಾತ್ರಿ ಪಡಿಸಿದ್ದಾರೆ. ಜೂ 26ರ ಸಂಜೆಯೊಳಗೆ ಧರ್ಮಸ್ಥಳದಲ್ಲಿರುವುದಾಗಿ ಕುಮಾರಸ್ವಾಮಿ ಹೇಳಿದರು. ಆದರೆ, ಆಣೆ ಪ್ರಮಾಣದ ವಿಷಯ ಏನು ಬಾಯಿ ಬಿಡಲಿಲ್ಲ. ಧರ್ಮಸ್ಥಳಕ್ಕೆ ತೆರಳುವ ಮಾರ್ಗ ವಿವರಗಳನ್ನು ಮಾತ್ರ ಸುದ್ದಿಗಾರರಿಗೆ ಮುಟ್ಟಿಸಿದರು. id="toptextpromo">ಜೂ
26 ರಂದು ಬೆಳಗ್ಗೆ ಮುಂಜಾನೆ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು 10.30 ಸುಮಾರಿಗೆ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಲಾಗುವುದು. ಅಲ್ಲಿಂದ ಮುಂದೆ ಮಾಗಡಿ, ಯಡಿಯೂರು, ಹಿರಿಸಾವೆ, ಬೆಳ್ಳೂರು ಕ್ರಾಸ್, ಚನ್ನರಾಯಪಟ್ಟಣ, ಹಾಸನ ತಲುಪಿ ನಂತರ ಸಕಲೇಶಪುರ, ಶಿರಾಡಿ ಘಾಟ್, ಗುಂಡ್ಯ ಮಾರ್ಗವಾಗಿ ಸಂಜೆ ವೇಳೆಗೆ ಧರ್ಮಸ್ಥಳ ತಲುಪಲಾಗುವುದು. id='are-slot-1' class='oiad oi-axt oiadv'> id='top-searched-articles'>ಧರ್ಮಸ್ಥಳದಲ್ಲಿ
ಎಚ್ ಡಿ ಕುಮಾರಸ್ವಾಮಿ ಹಾಗೂ ಆಪ್ತರಿಗೆ ಈಗಾಗಲೆ ರೂಮ್ ಗಳನ್ನು ಚೆಲುವರಾಯ ಸ್ವಾಮಿ ಅವರು ಬುಕ್ ಮಾಡಿದ್ದಾರೆ. ಜೂ 27 ರಂದು ಮುಂಜಾನೆ ಧರ್ಮಸ್ಥಳ ಶ್ರೀಮಂಜುನಾಥ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ದೇವಸ್ಥಾನದಲ್ಲಿ ಆಣೆ ಪ್ರಮಾಣ ಸಲ್ಲಿಸುವರೇ ಅಥವಾ ಬರೀ ದರ್ಶನಕ್ಕೆ ಮಾತ್ರ ಸೀಮಿತಗೊಳ್ಳುವರೆ ಎಂಬುದನ್ನು ಕಾದು ನೋಡಬೇಕಿದೆ. ದೇಗುಲ ದರ್ಶನದ ನಂತರ ಉಜಿರೆಯಲ್ಲಿ ನಡೆಯುವ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಕುಮಾರಸ್ವಾಮಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.











Click it and Unblock the Notifications