Get Updates
Get notified of breaking news, exclusive insights, and must-see stories!

ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತೆ ಜುಗಾರಿ ಕ್ರಾಸ್ !

Juagri Cross Play at Rangashankara
ಬೆಂಗಳೂರು, ಜೂ 23: ಸಮುದಾಯ ಬೆಂಗಳೂರು ಅಭಿನಯಿಸುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್ ದಿನಾಂಕ ಜೂನ್ 24 ರಂದು ನಗರದ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ. ನಟರಾಜ ಹೊನ್ನವಳ್ಳಿಯವರ ನಿರ್ದೇಶನದ ಈ ನಾಟಕ ಈಗಾಗಲೇ 50 ಕ್ಕೂ ಹೆಚ್ಚು ಪ್ರ್ರದರ್ಶನಗಳನ್ನು ಕಂಡಿದೆ.ವಾರಾಂತ್ಯದಲ್ಲಿ ಮಕ್ಕಳಿಂದ ಮುದುಕವರೆಗೆ ಮನರಂಜನೆ ನೀಡಬಲ್ಲ ಈ ನಾಟಕ ನೋಡಲು ಮರೆಯದಿರಿ ಎಂದು ಸಮುದಾಯ ತಂಡದ ಕಾರ್ಯದರ್ಶಿ ರವೀಂದ್ರನಾಥ್ ಸಿರಿವರ ಅವರು ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಯವರ ಜುಗಾರಿ ಕ್ರಾಸ್ ಒಂದು ವಿಶಿಷ್ಟ ಕಾದಂಬರಿ. ಕಾಡುಗಳ್ಳರ.ಕಾಳದಂಧೆಗಳ ಕುರಿತು ಈ ಕೃತಿಯಲ್ಲಿ ಮಾತನಾಡುವ ತೇಜಸ್ವಿಯವರು ಪರಿಸರ, ಪ್ರಾಕೃತಿಕ ಸಂಪತ್ತು, ಅವುಗಳನ್ನು ಕಾಪಾಡುವ ಬಗ್ಗೆ ತಮ್ಮದೇ ನೆಲೆಯಲ್ಲಿ ಮಾತನಾಡುತ್ತ ಬಂದವರು. ಕಾಡು ಮೇಡುಗಳಲ್ಲಿ ಅಲೆಯುತ್ತ ಪಕ್ಷಿ ಪರಿಸರಗಳ ಕುರಿತು ವಿಶೇಷ ಅಧ್ಯಯನ ಮಾಡಿದ ತೇಜಸ್ವಿ ಕಟ್ಟಿಕೊಟ್ಟ ಕಥೆಯನ್ನು ನಾಟಕ ರೂಪಕ್ಕೆ ತಂದವರು ಕನ್ನಡ ರಂಗಭೂಮಿಯ ಮತ್ತೊಬ್ಬ ವಿಶೇಷ ಪ್ರತಿಭೆ ಯಾದ ನಟರಾಜ ಹೊನ್ನವಳ್ಳಿ ಯವರು.

ನಾಟಕದ ವಿವರ: ಈ ನಾಟಕ ಕೇವಲ 24 ಘಂಟೆಗಳಲ್ಲಿ ನೆಡೆಯುವ ಒಂದು ರೊಮ್ಯಾಂಟಿಕ್ ಥ್ರಿಲ್ಲರ್, ಜೊತೆಗೆಯೇ ಇದು ನಿಜವಾಗಿಯೂ ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯಬಹುದಾದ ವಾಸ್ತವದ ಸಾಮಾಜಿಕ ಕಾದಂಬರಿ. ಮಲೆನಾಡಿನ ದಟ್ಟ ಕಾಡೇ ಕಾಳ ಧಂಧೆಗಳ ತವರೂರಾಗುವುದು, ಕಾಡಿನಿಂದ ಉತ್ಪತ್ತಿಯಾಗುವ ಕಾಳಧನ ದೇಶದ ರಾಜಕೀಯವನ್ನೇ ನಿಯಂತ್ರಿಸುವುದು, ಈ ಕಾಳ ವ್ಯವಹಾರಗಳ ಜೊತೆಜೊತೆಗೇ ಡ್ರಗ್ಸ್ ಮಾಫಿಯಾ ಜೂಜು ಸೇರಿ, ಅನೇಕ ವೇಳೆ ಇದ್ಯಾವುದಕ್ಕ್ಕೂ ಸಂಬಂಧಿಸದ ಮುಗ್ಧರನ್ನೂ ಪ್ರಾಣಾಪಾಯದ ಅಂಚಿಗೆ ತಳ್ಳಬಹುದು ಎಂಬುದೇ ಈ ಕಥೆಯ ಹಿನ್ನೆಲೆ. ಏಲಕ್ಕಿ ಬೆಳೆಗಾರ ಸುರೇಶ ಮತ್ತು ಅವನ ಹೆಂಡತಿ ಗೌರಿ ಏಲಕ್ಕಿ ವ್ಯಾಪಾರಕ್ಕೆಂದು ಪೇಟೆಗೆ ಬಂದವರು, ಅವರಿಗೇ ತಿಳಿಯದೇ ಕಳ್ಳ ಧಂಧೆಗೆ ಸಿಕ್ಕಿಕೊಂಡು ಕ್ಷಣ ಕ್ಷಣಕ್ಕೂ ರೋಚಕವಾಗಿ ಸಾಗುವ, ಬೆಚ್ಚಿಬೀಳಿಸುವ ಅಂಡರ್‌ವರ್ಲ್ಡ್‌ನ ಕಥೆಯೊಂದಿಗೆ ಹೆಣೆದುಕೊಂಡಿರುವ ನಾಟಕವೇ ಜುಗಾರಿ ಕ್ರಾಸ್.

ನಾಟಕ : ಜುಗಾರಿ ಕ್ರಾಸ್
ರಚನೆ : ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ನಾಟಕ ರೂಪ ಮತ್ತು ನಿರ್ದೇಶನ : ನಟರಾಜ್ ಹೊನ್ನವಳ್ಳಿ
ಸಂಗೀತ :ಗಜಾನನ ಟಿ. ನಾಯ್ಕ
ಸ್ಥಳ : ರಂಗಶಂಕರ, ಜೆ.ಪಿ. ನಗರ. ಬೆಂಗಳೂರು
ದಿನಾಂಕ/ವಾರ : 24/06/2011 ಶುಕ್ರವಾರ
ಸಮಯ : ಸಂಜೆ 7.30
ಸಂಪರ್ಕಿಸಿ : 99001 82400.
ಟಿಕೆಟ್ ದರ: 70 ರೂಪಾಯಿಗಳು.
ವೆಬ್ ಸೈಟ್ : www.indianstage.in

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+