10ನೇ ಕ್ಲಾಸ್ ಬಾಲಕಿಗೆ ಕಿರುಕುಳ: ಪ್ರಿನ್ಸಿಪಾಲ್ ಬಂಧನ
ಹೈದರಾಬಾದ್,
ಜೂನ್ 22: ಹತ್ತನೇ ತರಗತಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಲಿಟಲ್ ಫ್ಲವರ್ ಗ್ರಾಮರ್ ಹೈಸ್ಕೂಲಿನ ಪ್ರಿನ್ಸಿಪಾಲರನ್ನು ಪೊಲೀಸರು ಮಂಗಳವಾರ (ಜೂನ್ 21) ಬಂಧಿಸಿದ್ದಾರೆ. id="toptextpromo">ಪ್ರಿನ್ಸಿಪಾಲ್
ವೈ. ಸಾಂಬಶಿವ ರಾವ್ ಬಾಲಕಿಯ ಶಾಲಾ ಕೊಠಡಿಗೆ ತೆರಳಿ, ಕ್ಲಾಸ್ ಬಿಟ್ಟ ಮೇಲೆ ರೂಮಿನಲ್ಲೇ ಉಳಿಯುವಂತೆ ಬಾಲಕಿಗೆ ನಿರ್ದೇಶಿಸಿದ್ದರು. ಸ್ವಲ್ಪ ಸಮಯ ಬಿಟ್ಟು ಬಾಲಕಿಯ ಬಳಿ ಸಾಗಿದ ಸಾಂಬಶಿವ ರಾವ್ ಹುಡುಗಿಯನ್ನು ಬರಸೆಳೆದು, ಅವಳೊಂದಿಗೆ ಕೆಟ್ಟದಾಗಿ ನಡೆದುಕೊಂಡ ಎಂದು ಬಾಲಕಿ ಆರೋಪಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪ್ರಿನ್ಸಿಪಾಲ್
ಕಪಿಮುಷ್ಠಿಯಿಂದ ಬಿಡಿಸಿಕೊಂಡು ಹೊರಬಂದ ಬಾಲಕಿ ಸೀದಾ ಮನೆಗೆ ತೆರಳಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಘಟನೆಯ ಬಗ್ಗೆ ಆಕ್ರೋಶಗೊಂಡ ಪಾಲಕರು, ಸುತ್ತಮುತ್ತಲ ಮನೆಯವರನ್ನು ಜತೆಗೂಡಿಸಿಕೊಂಡು ಶಾಲೆಗೆ ತೆರಳಿ ಸಾಂಬಶಿವ ರಾವ್ ಬಟ್ಟೆ ಬಿಚ್ಚಿ ಚಚ್ಚಿದ್ದಾರೆ. ಬಳಿಕ ಆತನನ್ನು ನಮಗೆ ಒಪ್ಪಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 354ರ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಾಂಬಶಿವ ರಾವ್ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.











Click it and Unblock the Notifications