ಸಿಎಂ ಹಾಗೂ ಮಾಜಿ ಸಿಎಂಗೆ ದೇಗುಲ ಪ್ರವೇಶ ನಿಷಿದ್ಧ

ಜೂ.27ಕ್ಕೆಪ್ರತಿಭಟನೆ: ಆಣೆ- ಪ್ರಮಾಣ ನಾಟಕವನ್ನು ರೈತ, ದಲಿತ ಮತ್ತು ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸಲಿದ್ದು, ಜೂ.27ರಂದು ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಇಬ್ಬರನ್ನು ಧರ್ಮಸ್ಥಳ ದೇಗುಲ ಪ್ರವೇಶ ಮಾಡದಂತೆ ತಡೆಯುವ ಕೆಲಸವನ್ನು ರೈತ ಮತ್ತು ದಲಿತ ಸಂಘಟನೆಗಳು ಮಾಡಲಿವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ದೇವರಿಗೆ ಸುಪಾರಿ: ಬಸವಣ್ಣನ ಬಗ್ಗೆ ಮಾತನಾಡುವ ಎಳ್ಳಷ್ಟು ಯೋಗ್ಯತೆ ಇಲ್ಲದ ಈ ಯಡಿಯೂರಪ್ಪರ ವರ್ತನೆ ವೀರಶೈವ ತತ್ವದ ಗೌರವ, ಘನತೆ ಮತ್ತು ಆಶಯಗಳಿಗೆ ಧಕ್ಕೆ ತರುತ್ತಿದೆ ಎಂದು ವೀರಶೈವ ಮಠಾಧೀಶರುಗಳು ಬುದ್ಧಿವಾದ ಹೇಳದೇ ಇರುವುದೇಕೆ? ಎಂದು ಅಗ್ನಿ ಶ್ರೀಧರ್ ಪ್ರಶ್ನಿಸಿದ್ದಾರೆ.
ಮಂಜುನಾಥನಿಗೆ ಸುಪಾರಿ ಆಣೆ-ಪ್ರಮಾಣ ಸುಳ್ಳಾದರೆ ಇಡೀ ಕುಟುಂಬ ನಾಶ ಆಗುತ್ತೆ ಎಂಬ ನಂಬಿಕೆ ಇದೆ. "ಮಂಜುನಾಥ ಮಾತು ಬಿಡ, ತಿಮಪ್ಪ ಕಾಸು ಬಿಡ" ಎಂಬ ಮಾತಿದೆ. ಹಾಗಾಗಿ ಒಬ್ಬ ಮುಖ್ಯಮಂತ್ರಿಯಾಗಿ, ತುಂಬು ಕುಟುಂಬದ ಯಜಮಾನನಾಗಿ ಆಣೆ-ಪ್ರಮಾಣಕ್ಕೆ ಮುಂದಾಗಿ ಮತ್ತೊಂದು ಕುಟುಂಬದ ನಾಶ ಮಾಡಲು ಯಡಿಯೂರಪ್ಪ ಹೊರಟಿದ್ದಾರೆ. ಒಂದು ರೀತಿಯಲ್ಲಿ ಮಂಜುನಾಥನಿಗೆ ಕೊಲೆ ಸುಪಾರಿ ನೀಡಿದಂತಿದೆ ಎಂದು ಅಗ್ನಿ ಶ್ರೀಧರ್ ಕಿಡಿಕಾರಿದ್ದಾರೆ. ಇವರ ಹುಚ್ಚಾಟಕ್ಕೆ ಅವಕಾಶ ನೀಡಬಾರದು ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಮನವಿ ಮಾಡುವುದಾಗಿ ಹೇಳಿದರು.












Click it and Unblock the Notifications