ರಾಮದೇವ್ ಯೋಗಕ್ಕೆ ಹೋಗಬೇಡಿ: ಕಾಂಗ್ರೆಸ್ ಫತ್ವಾ
ನವದೆಹಲಿ,
ಜೂನ್ 21: ರಾಮದೇವ್ ಉಪವಾಸ ಸತ್ಯಾಗ್ರಹಕ್ಕೆ ಭಂಗ ತಂದು ಫಜೀತಿಗೀಡಾಗಿರುವ ಕಾಂಗ್ರೆಸ್ ಪಕ್ಷವು ರಾಮದೇವ್ ಯೋಗ ಶಿಬಿರಗಳಲ್ಲಿ ಪಾಲ್ಗೊಳ್ಳಬಾರದು ಎಂದು ಪಕ್ಷದ ಸದಸ್ಯರಿಗೆ ಮಂಗಳವಾರ ಫರ್ಮಾನು ಹೊರಡಿಸಿದೆ. id="toptextpromo">ಈ
ಮಧ್ಯೆ, ಜೂನ್ 30ಕ್ಕೆ ಜನ ಲೋಕಪಾಲ ಕರಡು ಮಸೂದೆ ಆಖೈರುಗೊಳಿಸಲಾಗುವುದು ಎಂದು ಯುಪಿಎ ಸರಕಾರ ಹೇಳುತ್ತಲೇ ಬಂದಿದೆ. ಆದರೆ ಆ ವೇಳೆಗೆ ಸರಕಾರಿ ಸಮಿತಿ ಮತ್ತು ಪೌರ ಸಮಿತಿ ಸದಸ್ಯರ ಮಧ್ಯೆ ಒಪ್ಪತ ಏರ್ಪಡುವುದು ಸಾಧ್ಯವಾಗಿಲ್ಲ. ಆದ್ದರಿಂದ ಜನ ಲೋಕಪಾಲ ಕರಡನ್ನು ನಿಗದಿಯಂತೆ ಸಂಸತ್ತಿನಲ್ಲಿ ಮಂಡಿಸಲು ಅಸಾಧ್ಯವಾಗಲಿದೆ. id='are-slot-1' class='oiad oi-axt oiadv'> id='top-searched-articles'>ಜತೆಗೆ
ಕಾಳಧನ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ತೊಡಗಿದ್ದ ಬಾಬಾ ರಾಮದೇವ್ ಅವರ ಉಪವಾಸ ಸತ್ಯಾಗ್ರಹಕ್ಕೆ ಭಂಗ ತಂದ ವಿಷಯದಲ್ಲಿ ಪ್ರತಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು ಖಚಿತ. ಇದನ್ನು ಸಮರ್ಥವಾಗಿ ಎದುರಿಸಲು ಯುಪಿಎಗೆ ಪ್ರತಿತಂತ್ರ ರೂಪಿಸಬೇಕಾಗಿದೆ. ಈ ಮುಜುಗರದಿಂದ ಪಾರಾಗಲು ಅಧಿವೇಶನ ಆರಂಭವನ್ನು 15 ದಿನಗಳ ಕಾಲ ಮುಂದೂಡಿದೆ. ಅಂದರೆ ಸಂಸತ್ತು ಅಧಿವೇಶನವು ಈಗ ಆಗಸ್ಟ್ 1ರಿಂದ ಸೆಪ್ಟೆಂಬರ್ 8ರವರೆಗೆ ನಡೆಯಲಿದೆ.











Click it and Unblock the Notifications