ಏರ್ ಟೆಲ್ ಬ್ರ್ಯಾಡ್ ಬ್ಯಾಂಡ್ 2 ಎಂಬಿಪಿಎಸ್ ಗೆ ಅಪ್ಡೇಟ್ ಮಾಡ್ಕೊಳ್ಳಿ

256 ಕೆಬಿಪಿಎಸ್ ಸಂಪರ್ಕ ಹೊಂದಿದ್ದವರು ಯಾವುದೇ ಖರ್ಚಿಲ್ಲದೆ ಇಂಟರ್ ನೆಟ್ ವೇಗವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಅದೇ 512 ಕೆಬಿಪಿಎಸ್ ಉಳ್ಳ ಗ್ರಾಹಕರಿಗೆ ವಿನಾಯತಿ ನೀಡುವ ಬಗ್ಗೆ ಸಂಸ್ಥೆ ಸ್ಪಷ್ಟವಾಗಿ ಹೇಳಿಲ್ಲ.
ಸದ್ಯದ ದರಪಟ್ಟಿಯಂತೆ ಏರ್ ಟೆಲ್ ಗ್ರಾಹಕರು 3 ಜಿಬಿ ಡಾಟಾಗೆ ರು 650 ನೀಡುತ್ತಿದ್ದಾರೆ. ಎಂಟಿಎನ್ ಎಲ್ ಗ್ರಾಹಕರು ಅದೇ ದುಡ್ಡಿಗೆ 5 ಜಿಬಿ ಪಡೆಯುತ್ತಿದ್ದಾರೆ. ಎಂಟಿಎನ್ ಎಲ್ ಮುಂಬೈನಲ್ಲಿ 2.5 ಜಿಬಿಗೆ 600 ರು ಪ್ರತಿ ತಿಂಗಳಿಗೆ ತಗುಲುತ್ತಿದೆ.ಬಿಎಸ್ ಎನ್ ಎಲ್ ಬೆಂಗಳೂರು ಕೇವಲ 300 ರು.ಗೆ 2 ಜಿಬಿ ವರೆಗೂ ಡಾಟಾ ಬಳಸುವ ಅವಕಾಶ ನೀಡುತ್ತದೆ. 4 ಜಿಬಿಗೆ 599 ರು ಆಗುತ್ತದೆ. ದರ ಪಟ್ಟಿ ವೆಚ್ಚಕ್ಕೆ ಶೇ 12 ರಷ್ಟು ತೆರಿಗೆ ಹಣ ಸೇರಿಸಿ ಎಲ್ಲಾ ಸೇವಾದಾರರು ಗ್ರಾಹಕರಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಒದಗಿಸುತ್ತಿದ್ದಾರೆ.
ಎಲ್ಲೆಲ್ಲಿ ಲಭ್ಯ: 2 ಎಂಬಿಪಿಎಸ್ ಸಂಪರ್ಕಗಳು ದೆಹಲಿ, ನೋಯ್ಡಾ, ಬೆಂಗಳೂರು, ಗುರ್ ಗಾಂವ್, ಫರಿದಾಬಾದ್, ಘಾಜಿಯಾಬಾದ್, ಚೆನ್ನೈ, ಹೈದರಾಬಾದ್, ಮುಂಬೈ ಹಾಗೂ ಪುಣೆಯಲ್ಲಿ ಲಭ್ಯವಿದೆ. ಉಳಿದ ನಗರಗಳಲ್ಲಿ 1 ಎಂಬಿಪಿಸ್ ಸಂಪರ್ಕ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ವೇಗ ಬೇಕಾದರೆ ಬಿಲ್ ದರದಲ್ಲಿ 100 ರು ಹೆಚ್ಚಾಗುತ್ತದೆ. 1 ಎಂಬಿಪಿಎಸ್ ಪಡೆಯುವ ನಗರಗಳಲ್ಲಿ 3 ಜಿಬಿಗೆ 549 ರು ಹಾಗೂ 6 ಜಿಬಿಗೆ 699 ರು ವೆಚ್ಚ ಆಗುತ್ತದೆ ಎಂದು ಏರ್ ಟೆಲ್ ಸಂಸ್ಥೆ ಪ್ರಕಟಿಸಿದೆ.












Click it and Unblock the Notifications