ಪೇಜಾವರಶ್ರೀಗಳೇ ಸುಮ್ಮನೆ ಕಿರಿಕ್ ಯಾಕೇ, ನೀವು ದಲಿತರಾಗಿ?

Dalits offer to Pejawar Seer
"ಜಾತಿ ಹಿಂದೂ ಧಮದ ಆತ್ಮವಿದ್ದಂತೆ, ಜಾತಿ ನಾಶ ಮಾಡುವುದು ಎಂದರೆ ಹಿಂದೂಧರ್ಮದ ನಾಶ ಮಾಡಿದಂತೆ. ಈ ಕಾರಣಕ್ಕೆ ಇರಬೇಕು ದಲಿತರು ಬೌದ್ಧ ಧರ್ಮ ಸ್ವೀಕರಿಸುವುದರಿಂದ ಅಸ್ಪೃಶ್ಯತೆ ನಾಶವಾಗದು ಎಂದು ಉಡುಪಿ ಪೇಜಾವರ ಸ್ವಾಮೀಜಿ ಫರ್ಮಾನು ಹೊರಡಿಸಿದ್ದಾರೆ. ಇದಕ್ಕೆ ದಲಿತ ಸಂಘರ್ಷ ಸಮಿತಿಯ ಉಡುಪಿ ಘಟಕ ಖಾರವಾಗೇ ಉತ್ತರಿಸಿದೆ.

ಇತ್ತೀಚೆಗೆ ಉಡುಪಿಯಲ್ಲಿ ಎರಡು ಸಾವಿರ ದಲಿತರ ಬೌದ್ಧ ಧರ್ಮ ದೀಕ್ಷೆ ಪಡೆದುಕೊಂಡ ಚಾರಿತ್ರಿಕ ದಲಿತರ ಪರಿವರ್ತನಾ ನಡಿಗೆ ಕಂಡು ಪೇಜಾವರ ಶ್ರೀಗಳು ಹೇಳಿಕೆ ನೀಡಿರುವುದು ವೈದಿಕಶಾಹಿ ದಿವಾಳಿತನದ ಪ್ರತೀಕವಾಗಿದೆ. ಚಾರಿತ್ರಿಕವಾಗಿಯೂ ಪಾರಂಪಾರಿಕವಾಗಿಯೂ ದಲಿತರು ಹಿಂದೂಗಳಲ್ಲ ಎನ್ನುವ ಸತ್ಯವನ್ನು ಶ್ರೀಗಳು ಮೊದಲು ಅರಿಯಬೇಕು.

ಅಸ್ಪೃಶ್ಯರು ಯಾವ ರೀತಿಯಲ್ಲಿ ಹಿಂದೂಗಳು ಎಂಬ ಸತ್ಯವನ್ನು ಪೇಜಾವರ ಶ್ರೀಗಳು ಸ್ಪಷ್ಟೀಕರಣ ನೀಡಲಿ. ಯಾವ ಪುರುಷಾರ್ಥಕ್ಕಾಗಿ ಅಸ್ಪೃಶ್ಯರು ಹಿಂದೂ ಧರ್ಮದ ಭಾಗವಾಗಬೇಕು ಎಂದು ಅರಿಯುವ ಜರೂರು ದಲಿತರಿಗಿದೆ. ಶತಮಾನಗಳಿಂದ ಅಸ್ಪೃಶ್ಯರು ಹಿಂದೂಗಳ ದಬ್ಬಾಳಿಕೆಯಿಂದ ಕ್ರೂರವಾಗಿ ನಲುಗಿದ್ದಾರ. ಜಗತ್ತಿನ ಯಾವುದೇ ಜನ ಸಮುದಾಯ ಹಿಂದೂ ಧರ್ಮದಷ್ಟು ಕ್ರೂರವಾಗಿ ಜನಾಂಗಿಯ ದಬ್ಬಾಳಿಕೆ ನಡೆಸಿಲ್ಲ.

ಇದಕ್ಕೆ ಏನಂತೀರಾ ಸ್ವಾಮಿ:ಬೆಲ್ಜಿ, ಚಿಪ್ರಾ, ಬೆಂಡಿಗೆರೆ, ಕಂಬಾಲಪಲ್ಲಿಗಳಲ್ಲಿ ದಲಿತರ ಮೇಲೆ ನಡೆದ ಕ್ರೂರ ಹತ್ಯಾಕಾಂಡ ಮತ್ತು ದೌರ್ಜನ್ಯ ದಲಿತರ ಮನಸ್ಸಿನಿಂದ ಆರದ ಗಾಯಗಳಾಗಿ ಉಳಿದಿವೆ. ಚಂದ್ರಗುತ್ತಿ, ಸವದತ್ತಿ ಇಲ್ಲೆಲ್ಲ ನಮ್ಮ ಅಕ್ಕ ತಂಗಿಯರನ್ನು ಹಿಂದೂ ಧರ್ಮ ಹೇಗೆ ನಡೆಸಿಕೊಳ್ಳುತ್ತಿದೆ ಎಂಬ ಅರಿವು ಪೇಜಾವರ ಶ್ರೀಗಳಿಗೆ ಇದೆಯೇ? ತಾಕತ್ತು ಇದ್ದರೆ ಈ ಅನಿಷ್ಟ ದೇವದಾಸಿ ಪರಂಪರೆಯಿಂದ ಮುಕ್ತಿಗೊಳಿಸುವ ಧಾರ್ಮಿಕ ಆಂದೋಲನ ಮೊದಲು ಕೈಗೊಳ್ಳಲಿ. ನಂತರ ಅಸ್ಪೃಶ್ಯರು ವೈದಿಕ ದೀಕ್ಷೆ ಕೈಗೊಳ್ಳಬೇಕೇ ಬೇಡವೇ ಎಂಬ ಬಗ್ಗೆ ನಿರ್ಧರಿಸೋಣ.

ಮತಾಂತರಗೊಳ್ಳುವುದು ಸಂವಿಧಾನಾತ್ಮಕ ಹಕ್ಕು. ಭಾರತ ಜಾತ್ಯತೀತ ರಾಷ್ಟ್ರ ಸರ್ವಧರ್ಮ ಸಮನ್ವಯತೆ, ಭಾರತೀಯ ಸಂಸ್ಕೃತಿ ಎಂದರೆ, ಮೃಗತ್ವ, ರಾಕ್ಷಸಿ ಪ್ರವೃತಿಯಿಂದ ವಿವೋಚನೆಗೊಳ್ಳುವುದೆಂದು ಅರ್ಥ. ಸಂಸ್ಕೃತಿ ಎಂದರೆ ಆರಾಧನೆ, ಪೂಜೆ, ಎಂದೆಲ್ಲ ಭಕ್ತಿಯ ಪಾಠವನ್ನು ದಲಿತರು ಪೇಜಾವರ ಶ್ರೀಗಳಿಂದ ಕಲಿಯಬೇಕಿಲ್ಲ.

ಅಸ್ಪೃಶ್ಯರ ಆಧ್ಯಾತ್ಮಿಕ ಹಿರಿತನಕ್ಕೆ ಬೇಡರ ಕಣ್ಣಪ್ಪ, ಏಕಲವ್ಯ, ಶಂಬೂಕ, ಹರಳಯ್ಯ, ಕನಕದಾಸ ಮುಂತಾಗಿ ದೊಡ್ಡ ಪರಂಪರೆ ಇದೆ. ಹಾಗಾಗಿ ಪೇಜಾವರ ಶ್ರೀಗಳೇ ಅಸ್ಪೃಶ್ಯತೆಯ ದೀಕ್ಷೆಯನ್ನು ಮೊದಲು ಪಡೆದುಕೊಳ್ಳಲಿ. ಹಿಂದೂ ವೈದಿಕ ಪರಂಪರೆಗಿಂತ ಶೂದ್ರ ಪರಂಪರೆ ದೊಡ್ಡದು. ಶೂದ್ರರೇ ಧರೆಗೆ ದೊಡ್ಡವರು. ಹಿಂದೂ ಧರ್ಮದ ಯಾವುದೇ ಸಂಸ್ಕೃತಿ ದಲಿತರದ್ದಲ್ಲ ಎಂಬ ಚಾರಿತ್ರಿಕ ಅರಿವು ದಲಿತರಿಗೆ ಇದೆ.

ಅಸ್ಪೃಶ್ಯರು ಬೌದ್ಧ ಧರ್ಮ ದೀಕ್ಷೆ ಎಂದರೆ ಜ್ಞಾನ, ತತ್ವ, ಅಹಿಂಸೆಯ ದಾರಿಯ ಕಡೆಗೆ ಮರಳಿ ಗೂಡಿಗೆ ಪಯಣಿಸುತ್ತಿದ್ದಾರೆ. ಇದು ಹಿಂದೂ ವೈದಿಕ ಧರ್ಮದ ಕಂದಚಾರ, ಮೌಢ್ಯದಿಂದ ವಿಮುಕ್ತಿ ಪಡೆಯುವ ದಾರಿ ಇದ್ದ ಹಾಗೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅಸ್ಪೃಶ್ಯರು ಅಖಂಡ ಭಾರತದ ಜಾತ್ಯತೀತ ತತ್ವ ಪಾಲಿಸುತ್ತಿದ್ದಾರೆ. ಪೇಜಾವರ ಶ್ರೀಗಳಂತೆ ಜಾತಿ ನಾಶವಾಗದು ಎಂಬ ಸಂವಿಧಾನ ವಿರೋಧಿ ಹೇಳಿಕೆ ನೀಡುವ ಮೂಲಕ ಸಾಮಾಜಿಕ ಸಾಮರಸ್ಯ ಕದಡುವ ಪ್ರವೃತ್ತಿ ಮಾಡುವುದಿಲ್ಲ. ಶ್ರೀಗಳ ಈ ಧೋರಣೆಯನ್ನು ದಸಂಸ ಉಗ್ರವಾಗಿ ಖಂಡಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+