ಕೆಎಸ್ ಆರ್ ಟಿಸಿ ವೋಲ್ವೋಗೆ ಎಂಎಸ್ ಆರ್ ಟಿಸಿ ಸ್ಪರ್ಧೆ

ಸೆಮಿ ಸ್ಲೀಪರ್ ಬಸ್ ಗಳಲ್ಲಿ ಸುಖಾಸೀನಗಳಿದ್ದು, ಕಾಲು ಚಾಚಿಕೊಳ್ಳಲು ಹೆಚ್ಚಿನ ಸ್ಥಳಾವಕಾಶ ನೀಡಲಾಗಿದೆ. ಸಾಮಾನ್ಯ ವೋಲ್ವೋ ಬಸ್ ಗಿಂತ ಹೆಚ್ಚಿನ ಸೌಕರ್ಯ, ಸುಖ ಪ್ರಯಾನ ಈ ಬಸ್ ಗಳಿಂದ ನಿರೀಕ್ಷಿಸಬಹುದು. ಉಚಿತವಾಗಿ ನೀರನ ಬಾಟಲ್ ಹಾಗೂ ಹೊದಿಕೆಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ.
ಜುಲೈ 5 ರಿಂದ ಮುಂಬೈ- ಬೆಂಗಳೂರು ಬಸ್ ಸೇವೆ ಆರಂಭವಾಗಲಿದೆ. ಪುಣೆ -ಬೆಂಗಳೂರು ಬಸ್ ಸೇವೆ ಜೂನ್ 7 ರಿಂದ ಆರಂಭವಾಗಿದೆ. 41 ಸೀಟುಗಳನ್ನು ಹೊಂದಿರುವ ಬಸ್ ನಲ್ಲಿ ಕೊನೆ ನಾಲ್ಕು ಸೀಟುಗಳನ್ನು ಬಿಟ್ಟರೆ ಉಳಿದ ಸೀಟುಗಳು 130 ಡಿಗ್ರಿಯಷ್ಟು ವಾಲಿಸಿಕೊಂಡು ಮಲಗಬಹುದಾಗಿದೆ.
ಮುಂಬೈ-ಬೆಂಗಳೂರು ಬಸ್ ಮುಂಬೈನಿಂದ ಪ್ರತಿದಿನ ಸಂಜೆ 4 ಗಂಟೆಗೆ ಹೊರಡಲಿದೆ. ಸ್ವರ್ಗತೆ(ಪುಣೆ)-ಸತಾರಾ-ಕೊಲ್ಲಾಪುರ-ಬೆಳಗಾವಿ-ಹುಬ್ಬಳ್ಳಿ-ಹಾವೇರಿ-ಹರಿಹರ-ದಾವಣಗೆರೆ-ತುಮಕೂರು ಮಾರ್ಗವಾಗಿ ಬೆಂಗಳೂರು ಸೇರಲಿದೆ. ಒಟ್ಟು 1,016 ಕಿ.ಮೀ ಕ್ರಮಿಸಿ ಬೆಳಗ್ಗೆ 10 ಗಂಟೆಗೆ ಬೆಂಗಳೂರಿಗೆ ಬರಲಿದೆ.
ರಿಟರ್ನ್ ಜರ್ನಿ ಸಂಜೆ 7 ಗಂಟೆಗೆ ಆರಂಭಿಸಿ ಅದೆ ಮಾರ್ಗದಲ್ಲಿ ಸಾಗಿ ಮರುದಿನ ಮಧ್ಯಾಹ್ನ 1 ಗಂಟೆಗೆ ಮುಂಬೈ ಸೆಂಟ್ರೆಲ್ ಬಸ್ ನಿಲ್ದಾಣ ಸೇರಲಿದೆ.












Click it and Unblock the Notifications