ಒಂಭತ್ತನೆ ತರಗತಿ ಫೇಲಾದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
ಬೆಂಗಳೂರು,
ಜೂ.11: ಒಂಭತ್ತನೆ ತರಗತಿಯಲ್ಲಿ ಫೇಲಾದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಅಗರ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಭರತ್ ರಾಜ್ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. id="toptextpromo">ಮಾರ್ಚ್
ತಿಂಗಳಲ್ಲಿ ನಡೆದ ಒಂಭತ್ತನೆ ತರಗತಿಯಲ್ಲಿ ಈ ಹುಡುಗ ಅನುತ್ತೀರ್ಣಗೊಂಡಿದ್ದ. ಆದರೆ ಈ ವಿಷಯವನ್ನು ಪೋಷಕರಿಗೆ ಆತ ತಿಳಿಸಿರಲಿಲ್ಲ. ಶಾಲೆ ಆರಂಭವಾದ ಬಳಿಕ ಆತ ಕ್ಲಾಸಿಗೆ ಹಾಜರಾಗದೆ ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದ. id='are-slot-1' class='oiad oi-axt oiadv'> id='top-searched-articles'>ಆತನ
ಪೋಷಕರು 10ನೇ ತರಗತಿ ಶುಲ್ಕ ಕಟ್ಟಲು ಶಾಲೆಗೆ ಹೋದಾಗ ಭರತ್ ಫೇಲಾದ ವಿಷಯ ಗೊತ್ತಾಗಿದೆ. ಇದರಿಂದ ಕೋಪಗೊಂಡ ಆತನ ತಂದೆ ಭರತ್‌ನನ್ನು ಮನಬಂದಂತೆ ಬೈದಿದ್ದಾರೆ. ಇದರಿಂದ ಆತ ಬೇಸರಗೊಂಡು ಆತ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. (ದಟ್ಸ್‌ಕನ್ನಡ ವಾರ್ತೆ)











Click it and Unblock the Notifications