ಚಳವಳಿ ನಡೆಸುವಲ್ಲಿನ ಬಾಬಾ ಪ್ರೌಢತೆ ಕುರಿತು ಅಣ್ಣಾ ಕಳವಳ
ನವದೆಹಲಿ,
ಜೂನ್ 11: ಬೃಹತ್ ಸಾಮಾಜಿಕ ಚಳವಳಿಯೊಂದನ್ನು ಮುನ್ನಡೆಸುವಷ್ಟು ಪ್ರೌಢತೆ ಬಾಬಾ ರಾಮದೇವ್ ಇಲ್ಲವೆಂದು ಅಣ್ಣ ಹಜಾರೆ ಕಳವಳ ವ್ಯಕ್ತಪಡಿಸಿದ್ದಾರೆ. id="toptextpromo">"ಯೋಗ
ಹೊರತುಪಡಿಸಿದರೆ ರಾಮದೇವ್ ಗೆ ಬೇರೆ ವಿಷಯಗಳಲ್ಲಿ ಹೆಚ್ಚು ಪರಿಣತಿ ಸಾಲದು. ಚಳವಳಿಯೊಂದರಲ್ಲಿ ಭಾಗವಹಿಸುವಾಗ ಹಲವು ವಿಷಯಗಳ ಕುರಿತು ಎಚ್ಚರಿಕೆ ವಹಿಸಬೇಕಾಗುತ್ತದೆ. ಅವರಿಗೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವ ಗುಣವಿದೆ" ಎಂದು ಅಣ್ಣಾ ಅಭಿಪ್ರಾಯಪಟ್ಟಿದ್ದಾರೆ. id='are-slot-1' class='oiad oi-axt oiadv'> id='top-searched-articles'>"ಪ್ರತಿದಿನ
ಅವರ ನಿರಶನ ಹೊಸ ಹೊಸ ತಿರುವು ಪಡೆಯುತ್ತಿದೆ. ಕೆಲವೊಮ್ಮೆ ರಾಜಕಾರಣ ಪ್ರವೇಶಿಸುತ್ತದೆ. ಸೇನೆ ಕಟ್ಟುವ ಕುರಿತು ರಾಮದೇವ್ ಮಾತನಾಡುತ್ತಾರೆ. ಹೀಗಾಗಿ ಇಂತಹ ಬೃಹತ್ ಚಳವಳಿ ನಡೆಸುವಲ್ಲಿ ಬಾಬಾ ಪ್ರೌಢತೆ ಸಾಕಾಗದು ಎನಿಸುತ್ತದೆ" ಎಂದು ಅವರು ಹೇಳಿದ್ದಾರೆ











Click it and Unblock the Notifications