ದಿಗ್ವಿಜಯ್ ಸಿಂಗ್ ರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ: ಅಣ್ಣಾ
ನವದೆಹಲಿ
ಜೂ 11: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮತ್ತು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನಡುವೆ ಆರೋಪ ಪ್ರತ್ಯಾರೋಪ ಮುಂದುವರಿದಿದ್ದು, ದಿಗ್ವಿಜಯ್ ಸಿಂಗ್ ಮಾನಸಿಕ ಸ್ಥಿಮಿತ ಕಳೆದು ಕೊಂಡಿದ್ದಾರೆ, ಅವರನ್ನು ಪುಣೆಯಲ್ಲಿರುವ ಯರವಾಡ ಹುಚ್ಚಾಸ್ಪತ್ರೆಗೆ ದಾಖಲಿಸುವುದು ಸೂಕ್ತ ಎಂದು ಅಣ್ಣಾ ಹಜಾರೆ ಲೇವಡಿ ಮಾಡಿದ್ದಾರೆ. id="toptextpromo">ಏಪ್ರಿಲ್
ನಲ್ಲಿ ಭ್ರಸ್ಟಾಚಾರದ ವಿರುದ್ದ ಜಂತರ್ ಮಂತರ್ ನಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹ ಆರ್ಎಸ್ಎಸ್ ಪ್ರಾಯೋಜಿತ ಎಂದು ಹೇಳಿದ್ದ ದಿಗ್ವಿಜಯ್ ಸಿಂಗ್ ಹೇಳಿಕೆಗೆ ಉತ್ತರಿಸುತ್ತಾ, ದಿಗ್ವಿಜಯ್ ಹೇಳಿಕೆ ಬಾಲಿಶವಾದದ್ದು, ಮಾನಸಿಕವಾಗಿ ಸರಿಯಾಗಿದ್ದವರು ನನ್ನ ಬಗ್ಗೆ ಈ ರೀತಿಯ ಆರೋಪ ಹೊರಿಸುವುದಿಲ್ಲ. ಪುಣೆಯ ಬಳಿ ಯರವಾಡ ಎನ್ನುವಲ್ಲಿ ಮೆಂಟಲ್ ಆಸ್ಪತ್ರೆಯಿದೆ. ಕಾಂಗ್ರೆಸ್ ತಡ ಮಾಡದೆ ಅವರನ್ನು ಅಲ್ಲಿ ಅಡ್ಮಿಟ್ ಮಾಡಲಿ ಎಂದು ವ್ಯಂಗ್ಯ ವಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪ್ರಧಾನಿ
ಮತ್ತು ಸಂಪುಟದ ಸದಸ್ಯರು ಆಸ್ತಿ ವಿವರ ಬಹಿರಂಗ ಪಡಿಸಿದ್ದು ಒಳ್ಳೆ ಬೆಳವಣಿಗೆ. ಕೇಂದ್ರ ಮತ್ತು ರಾಜ್ಯದ ಎಲ್ಲಾ ಸಚಿವರುಗಳು ತಮ್ಮ ತಮ್ಮ ಆಸ್ತಿ ವಿವರ ಗಳನ್ನೂ ವರ್ಷಕ್ಕೊಮ್ಮೆ ಬಹಿರಂಗ ಪಡಿಸಲಿ. ಈ ಮೂಲಕ ಆಡಳಿತದಲ್ಲಿ ಪಾರದರ್ಶತೆ ಇರಲಿ ಎಂದು ಅಣ್ಣಾ ಒತ್ತಾಯಿಸಿದ್ದಾರೆ.











Click it and Unblock the Notifications