ಚಿಕಾಗೋದಲ್ಲಿ ರಾಣಾ ನಿರ್ದೋಷಿ; ನೋ ಪ್ರಾಬ್ಲಂ: ಭಾರತ
ನವದೆಹಲಿ,
ಜೂ 10: 2008ರ ಮುಂಬೈ ಉಗ್ರರ ದಾಳಿ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ತಹವಾರ್ ರಾಣಾಗೆ ಚಿಕಾಗೋದ ಕೋರ್ಟ್ ನಿರ್ದೋಷಿ ಮುಕ್ತ ಎಂದು ಘೋಷಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ಗೃಹ ಇಲಾಖೆ, ಇದರಿಂದ ಯಾವುದೇ ಬಾಧೆ ಇಲ್ಲ. ಭಾರತದ ಮೋಸ್ಟ್ ವಾಟೆಂಡ್ ಕ್ರಿಮಿನಲ್ ಪಟ್ಟಿಯಲ್ಲಿ ಆತನ ಸ್ಥಾನ ಕೆಳಗೇನೂ ಇಳಿಯುವುದಿಲ್ಲ ಎಂದಿದೆ. id="toptextpromo">ರಾಣಾ
ಹಾಗೂ ಅವರ ಸಹಚರ ಡೆವಿಡ್ ಹೆಡ್ಲಿ ವಿರುದ್ಧ ಭಾರತದಲ್ಲಿ ವಿಚಾರಣೆ ನಡೆಯುತ್ತಿದೆ. ನಮ್ಮ ತನಿಖಾ ಸಂಸ್ಥೆಗಳು ನಡೆಸುತ್ತಿರುವ ತನಿಖೆಗೆ ಈ ತೀರ್ಪು ಹಿನ್ನಡೆಯಾಗುವುದಿಲ್ಲ ಎಂದು ಅಂತರಿಕ ಭದ್ರತೆ ಗೃಹ ವ್ಯವಹಾರದ ಕಾರ್ಯದರ್ಶಿ ಯುಕೆ ಬನ್ಸಾಲ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹೊರ
ರಾಷ್ಟ್ರಗಳಲಿ ನಡೆದ ವಿಚಾರಣೆಯಲ್ಲಿ ಬರೀ ವಾದ ಮಂಡಿಸಬಹುದು. ಉಗ್ರರನ್ನು ನಮ್ಮ ನ್ಯಾಯಾಲಯಕ್ಕೆ ಕರೆ ತಂದರೆ ಶಿಕ್ಷೆ ನೀಡಬಹುದು. ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಯಲಿದೆ. ಚಿಕಾಗೋದಲ್ಲಿರುವ ಪಾಕ್ ಮೂಲದ ಉಗ್ರ ರಾಣಾ ಲಷ್ಕರ್ ಇ ತೋಯ್ಬಾಗೆ ಹಣ ಒದಗಿಸುತ್ತಾನೆ ಎಂಬ ಆರೋಪವನ್ನು ಸಹ ಎದುರಿಸುತ್ತಿದ್ದಾನೆ.











Click it and Unblock the Notifications