ಆಡ್ವಾಣಿ ಪಟ್ಟಾಭಿಷೇಕಕ್ಕೆ ರಾಮದೇವ್ ಗೆ ಗುತ್ತಿಗೆ

ಯುಪಿಎ ಮತ್ತು ಪ್ರಧಾನಿಯವರನ್ನು ದೇಶದ ಜನತೆ ಆಯ್ಕೆ ಮಾಡಿದೆಯೇ ಹೊರತು ನಾಗರಿಕ ಸಮಿತಿ ಅಲ್ಲ. ತರಾತುರಿಯಲ್ಲಿ ಆಡ್ವಾಣಿ ಪ್ರಧಾನಿಯಾಗುವ ಕನಸು ಕಾಣುವುದು ಬೇಡ, ಅವರು ಸ್ವಲ್ಪ ತಾಳ್ಮೆ ವಹಿಸಲಿ. ಬಿಜೆಪಿ ಮತ್ತು ಆರ್ಎಸ್ಎಸ್ ಅಣ್ಣಾ, ರಾಮದೇವ್ ಜೊತೆ ಸೇರಿ ಅಧಿಕಾರ ಪಡೆಯಲು ತಂತ್ರ ರೂಪಿಸಿದೆ. ಇಲ್ಲಿಯವರೆಗೆ ಅಣ್ಣಾ ಮತ್ತು ಟೀಮ್ ಏನು ಮಾಡುತ್ತಿತ್ತು ಹರಿ ಪ್ರಸಾದ್ ಕಿಡಿಕಾರಿದ್ದಾರೆ.
ರಾಮಲೀಲಾ ಮೈದಾನದಲ್ಲಿ ಸಂಘಪರಿವಾರದವರು ಹಿಂಸಾಚಾರ ಸೃಷ್ಟಿಸಿಲೆಂದೇ ಲಕ್ಷೋಪಲಕ್ಷ ಜನ ಸೇರಿಸಿದ್ದರು. ರಾಮಲೀಲಾ ಮೈದಾನ ಇರುವ ಜಾಗ ಮುಸಲ್ಮಾನರು ಹೆಚ್ಚಾಗಿ ಇರುವ ಪ್ರದೇಶ ಆಗಿರುವುದರಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರಬಹುದೆಂದು ಪೊಲೀಸರು ಸೂಕ್ತ ಕ್ರಮ ಕೈಗೊಂಡರು ಎಂದರು.
ರಾಷ್ಟ್ರಪಿತ ಸಮಾಧಿ ಬಳಿ ವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ನೃತ್ಯ ಮಾಡಿ ದೇಶಕ್ಕೆ ಅವಮಾನ ಮಾಡಿದ್ದಾರೆ, ಈ ಕೂಡಲೇ ಸುಷ್ಮಾ ರಾಜೀನಾಮೆ ನೀಡಲಿ ಎಂದು ಹರಿಪ್ರಸಾದ್ ಆಗ್ರಹಿಸಿದ್ದಾರೆ.











Click it and Unblock the Notifications