ಅಡ್ವಾಣಿ ಸಂತುಷ್ಟಗೊಳಿಸಲು ಕೊನೆಗೂ ಬಿಎಸ್ ವೈ ಶಪಥ

Advani , Yeddyurappa
ಬೆಂಗಳೂರು, ಜೂನ್ 6: ತಮ್ಮ ವಿರುದ್ಧ ಹರಿದುಬರುತ್ತಿರುವ ಆರೋಪಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯೊದಗಿರುವ ಬಗ್ಗೆ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ನೇರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಅವರನ್ನು ಸಂತುಷ್ಟ ಗೊಳಿಸಿ, ಮೆಚ್ಚುಗೆ ಗಳಿಸಲು ಸ್ವಯಂ ಮೂರು ತಿಂಗಳ ಗಡುವು ಹಾಕಿಕೊಂಡಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

'ನಾನಾ ಅಭಿವದ್ಧಿಪರ ಕ್ರಮಗಳನ್ನು ಕೈಗೊಳ್ಳುವ ಮೂಲಕ ನನ್ನ ಸರಕಾರ ಮತ್ತು ಪಕ್ಷದ ವರ್ಚಸ್ಸನ್ನು ಇನ್ನು ಮೂರೇ ತಿಂಗಳಲ್ಲಿ ಬದಲಿಸುವೆ. ಈ ಸಂಬಂಧ ಸಂಪುಟದ ಸಹೋದ್ಯೋಗಿಗಳ ಬಗ್ಗೆ ವಿಸ್ತ್ಋತವಾಗಿ ಚರ್ಚೆ ನಡೆಸುವೆ. ಪಕ್ಷದ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಅಡ್ವಾಣಿ ಅವರು ನೀಡಿರುವ ಸಲಹೆ ಸೂಚನೆಗಳನ್ನು ಶಿರಸಾವಹಿಸಿ ಪಾಲಿಸುವೆ' ಎಂದು ಯಡಿಯೂರಪ್ಪ ಅವರು ಸೋಮವಾರ ಘೋಷಿಸಿದ್ದಾರೆ.

ಚೆನ್ನೈ ವರದಿ: ಇತ್ತೀಚೆಗಷ್ಟೇ ಮೂರನೇ ವರ್ಷಾಚರಣೆ ಆಚರಿಸಿಕೊಂಡ ಯಡಿಯೂರಪ್ಪ ಸರ್ಕಾರದ ಬಗ್ಗೆ ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಆಡ್ವಾಣಿ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ವಿರುದ್ಧ ಹಗರಣಗಳು ಕೇಳಿಬಂದಿರುವುದರಿಂದ ಆಡ್ವಾಣಿ ಅವರಿಗೆ ಬೇಸರವಾಗಿದೆ, ಇದರಿಂದಾಗಿ ತಮ್ಮನ್ನು ಭೇಟಿ ಮಾಡಲು ಯಡಿಯೂರಪ್ಪ ಸಮಯಾವಕಾಶ ಕೇಳಿದರೆ ಆಡ್ವಾಣಿ ನೀಡುತ್ತಿಲ್ಲ ಎಂಬ ಸುದ್ದಿಗಳು ರಾಜ್ಯ ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದ್ದವು. ಆದರೆ ಇದೆಲ್ಲಾ ನಿಜ ಎನ್ನುವಂತೆ ಆಡ್ವಾಣಿ ಭಾನುವಾರ (ಜೂನ್5) ಮಾತನಾಡಿದ್ದಾರೆ.

ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಪುತ್ರ ರೋಹನ್‌ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ಆಗಮಿಸಿದ್ದ ಆಡ್ವಾಣಿ ಸುದ್ದಿಗಾರರಿಗೆ ಸಿಕ್ಕರು. ಸಹಜವಾಗಿಯೇ ಸುದ್ದಿಗಾರರು ಕರ್ನಾಟಕದ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರಗಳ ಕುರಿತು ಆಡ್ವಾಣಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಆಡ್ವಾಣಿ, ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನನಗಂತೂ ಸಂತೋಷವಿಲ್ಲ. ಈ ವಿಷಯವನ್ನು ಅವರಿಗೂ (ಯಡಿಯೂರಪ್ಪ) ತಿಳಿಸಿದ್ದೇನೆ ಎಂದು ಹೇಳಿದರು. ಇದಲ್ಲದೆ ಬಿಹಾರ, ಗುಜರಾತ್‌ ಹಾಗೂ ಛತ್ತೀಸ್‌ಗಢದಲ್ಲಿರುವ ಬಿಜೆಪಿ, ಎನ್‌ಡಿಎ ಸರ್ಕಾರಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಆದರೆ ಕರ್ನಾಟಕ ಸರ್ಕಾರದ ಕಾರ್ಯನಿರ್ವಹಣೆ ಬಗ್ಗೆ ಅವರು ಏನನ್ನೂ ಹೇಳಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+