ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲ: ರಾಮದೇವ್ ಘೋಷಣೆ

Ramdev
ನವದೆಹಲಿ, ಜೂನ್ 5: ಕಾಳಧನದ ವಿರುದ್ಧ ಆರಂಭಿಸಿರುವ ಹೋರಾಟವನ್ನು ಮುಂದುವರಿಸುವೆ, ಯಾವುದೇ ಕಾರಣಕ್ಕೂ ಉಪವಾಸ ಸತ್ಯಾಗ್ರಹ ಸ್ಥಗಿತಗೊಳಿಸುವುದಿಲ್ಲ ಎಂದು ಯೋಗ ಗುರು ಬಾಬಾ ರಾಮದೇವ್ ಅವರು ಹರಿದ್ವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.

ಶನಿವಾರ ಮಧ್ಯ ರಾತ್ರಿ ಹೆಂಗಸರು, ಮಕ್ಕಳು ಎನ್ನದೆ ಅಮಾಯಕ ಜನರ ಮೇಲೆ ಪೊಲೀಸರು ನಡೆಸಿದ ಕ್ರೌರ್ಯವನ್ನು ಕಟುಶಬ್ದಗಳಲ್ಲಿ ಅವರು ಖಂಡಿಸಿದರು. ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅದರಲ್ಲೂ ತಮ್ಮ ಮತ್ತು ಸರಕಾರದ ನಡುವಣ ಸಂಧಾನಕಾರರಾಗಿದ್ದ ಸಚಿವ ಕಪಿಲ್ ಸಿಬಲ್ ವಿರುದ್ಧ ತೀವ್ರವಾಗಿ ಹರಿಹಾಯ್ದರು.

ಎನ್ ಕೌಂಟರ್ ಗೆ ಆದೇಶ? : ಪೊಲೀಸರು ನನ್ನ ಬೆನ್ನುಹತ್ತಿದ್ದು ಅವರ ಕಣ್ತತಪ್ಪಿಸಿ ಮಾಧ್ಯಮದೆದುರು ಕಾಣಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ನನ್ನ ಮೇಲೆ ಪೊಲೀಸರು ಹತ್ಯಾ ಪ್ರಯತ್ನ ನಡೆಸಿದ್ದಾರೆ. ನನ್ನ ಜೀವಕ್ಕೆ ಸಂಚಕಾರ ಬಂದರೆ ಅದಕ್ಕೆ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರೇ ಕಾರಣವಾಗುತ್ತಾರೆ ಎಂದು ರಾಮದೇವ್ ಹೇಳಿದರು. ತಾವು ಯಾವಾಗಲೂ ತೊಡುತ್ತಿದ್ದ ಕೇಸರಿ ಉಡುಪನ್ನು ತ್ಯಜಿಸಿ, ಹೆಣ್ಣುಮಕ್ಕಳು ಧರಿಸುವಂತೆ ಬಿಳಿ ಚೂಡಿದಾರ್ ಧರಿಸಿ, ಸುದ್ದಿಗೋಷ್ಠಿಗೆ ಬರಬೇಕಾಯಿತು ಎಂದು ಅವರು ಹೇಳಿದರು.

ಅದಕ್ಕೂ ಮುನ್ನ, ರಾಜಧಾನಿಯನ್ನು ತೊರೆಯುವಂತೆ ಸರಕಾರ ಗಡುವು ನೀಡಿದ್ದರಿಂದ ವಿಶೇಷ ವಿಮಾನದಲ್ಲಿ ಬೆಳಗ್ಗೆ 11 ಗಂಟೆಗೆ ಹರಿದ್ವಾರದಲ್ಲಿರುವ ತಮ್ಮ ಆಶ್ರಮ ತಲುಪಿದ ರಾಮದೇವ್ ಅವರಿಗೆ ಅನುಯಾಯಿಗಳು ಭಾರಿ ಸ್ವಾಗತ ನೀಡಿದರು. ಇನ್ನು 15 ದಿನಗಳ ಕಾಲ ದೆಹಲಿಯಲ್ಲಿ ಕಾಣಿಸಿಕೊಳ್ಳುವುದರ ವಿರುದ್ಧ ರಾಮದೇವ್ ಗೆ ಪೊಲೀಸರು ನಿಷೇಧ ವಿಧಿಸಿದ್ದಾರೆ.

ರಾಮದೇವ್‌ ಆದಾಯಗಳ ಬಗ್ಗೆ ತನಿಖೆ: ಈ ಮಧ್ಯೆ, ಬಾಬಾ ರಾಮದೇವ್ ಅವರ ಆದಾಯ ಮೂಲಗಳ ಬಗ್ಗೆ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಕ್ಕೆ ಕೇಂದ್ರ ಸರಕಾರ ಭಾನುವಾಋ ಆದೇಶ ನೀಡಿದೆ.
ಇದರ ಜತೆಗೆ ರಾಮದೇವ್ ಯಾರೆಲ್ಲ ದೇಣಿಗೆ ನೀಡಿದ್ದಾರೋ ಅವರ ಆದಾಯ ಮೂಲಗಳ ಬಗ್ಗೆಯೂ ತನಿಖೆ ನಡೆಸುವಂತೆ ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+