ಬಾಬಾ ಬಂಧನದ ವಿರುದ್ಧ ಬೆಂಗಳೂರಿಗರ ಆಕ್ರೋಶ

ಕೇಂದ್ರದ ವಿರುದ್ಧ ದಿಕ್ಕಾರ ಕೂಗುತ್ತ ರಸ್ತೆ ತಡೆಯನ್ನೂ ಮಾಡುತ್ತಿದ್ದಾರೆ. ಇದರಿಂದಾಗಿ ಮಹಾರಾಣಿ ಕಾಲೇಜು ರಸ್ತೆಯಲ್ಲಿ ಸಂಚಾರ ದಟ್ಟಣೆಯಿಂದ ಜನರು ಪರದಾಡುತ್ತಿರುವುದು ಕಂಡು ಬಂದಿದೆ.
ಬಾಬಾ ರಾಮದೇವ್ ಬಂಧನಕ್ಕೆ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಬಾಬಾ ಬಂಧನವನ್ನು ಅಡ್ವಾಣಿ ಜಲಿಯನ್ ವಾಲ್ ಬಾಗ್ ದುರಂತಕ್ಕೆ ಹೋಲಿಸಿದರೆ, ನರೇಂದ್ರ ಮೋದಿ ಇದನ್ನು ಇತಿಹಾಸದಲ್ಲಿಯೇ ಕರಾಳ ದಿನವೆಂದು ಕರೆದಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಿನ್ನೆಯೂ ಬಾಬಾ ಅವರಿಗೆ ಬೆಂಬಲ ಸೂಚಿಸಿ ಸಾವಿರಾರು ಜನರು ಸೇರಿದ್ದರು. ಅದರಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.












Click it and Unblock the Notifications