ಒಂಭತ್ತು ವಿಧೇಯಕ ಮಂಡನೆಯಾಗುವುದೆ? ಸ್ಪೀಕರ್

Speaker KG Bopaiah
ಬೆಂಗಳೂರು ಜೂ 3: ಜೂನ್ 2 ರಿಂದ ಪ್ರಾರಂಭವಾದ ರಾಜ್ಯ ವಿಧಾನಸಭೆಯ 10ನೇ ಅಧಿವೇಶನದಲ್ಲಿ ಒಂಭತ್ತು ವಿಧೇಯಕಗಳು ಮಂಡನೆಯಾಗಲು ಸಿದ್ಧಗೊಂಡಿವೆ. ಜೂನ್ 15 ರವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ಎಂಟು ದಿನಗಳು ಪ್ರಶ್ನೋತ್ತರ ವೇಳೆ ಹಾಗೂ ಶೂನ್ಯ ವೇಳೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಪ್ರತಿಪಕ್ಷಗಳಾದ ಜೆಡಿಎಸ್ ಹಾಗೂ ಕಾಂಗ್ರೆಸ್ ಅಧಿವೇಶನಕ್ಕೆ ಗೈರು ಹಾಜರಾಗುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಪ್ರತಿಪಕ್ಷಗಳ ನಡೆ ಸದನಕ್ಕೆ ಮಾರಕವೇ?: ಸದನದ ಕಲಾಪಕ್ಕೆ ಪ್ರತಿಪಕ್ಷಗಳು ಬಹಿಷ್ಕರಿಸಿದರೆ ಸಂವಿಧಾನಿಕ ಬಿಕ್ಕಟ್ಟು ಉಂಟಾಗುವುದಿಲ್ಲವೆ ? ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಭಾಪತಿ ಬೋಪಯ್ಯ ಅವರು ಯಾವುದೇ ಕಾನೂನು ತೊಡಕು ಉಂಟಾಗುವುದಿಲ್ಲ, ಆದರೆ, ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳ ಪಾಲ್ಗೊಳ್ಳುವಿಕೆಯಿಂದ ಮಾತ್ರ ಕಲಾಪ ಅರ್ಥಪೂರ್ಣವಾಗುತ್ತದೆ. ಪ್ರತಿಪಕ್ಷಗಳು ಸದನಕ್ಕೆ ಬಂದು ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಮಾಧ್ಯಮಗಳ ಮೂಲಕ ಮನವಿ ಮಾಡುವುದಾಗಿ ಬೋಪಯ್ಯ ಹೇಳಿದರು.

ಮಂಡನೆಗೆ ಸಿದ್ಧವಾಗಿರುವ ವಿಧೇಯಕಗಳು :
ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ :2007,
ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ವಿಧೇಯಕ: 2001,
ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ : 2011,
ಕರ್ನಾಟಕ ರಾಜ್ಯ ನವೀನಾತ್ಮಕ ವಿಶ್ವವಿದ್ಯಾಲಯ ವಿಧೇಯಕ :2011,
ಕರ್ನಾಟಕ ಕಲ್ಲು ಪುಡಿ ಮಾಡುವ ಘಟಕಗಳ (ಕ್ರಷರ್‌ಗಳ) ವಿನಿಮಯದ ಹಾಗೂ ನಿಯಂತ್ರಣ ವಿಧೇಯಕ: ೨೦೧೧, ಕರ್ನಾಟಕ ಸಚಿವರುಗಳ ವೇತನ ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ :2011,
ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ :2011,
(ಕರ್ನಾಟಕ ಪ್ರಾದೇಶಿಕ ಕಾನೂನುಗಳ) ನಿರಸನಗೊಳಿಸುವ ವಿಧೇಯಕ :2011
ಹಾಗೂ ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗ (ತಿದ್ದುಪಡಿ) ವಿಧೇಯಕ:2011

ರಾಜೀನಾಮೆ ಇಲ್ಲ: ಅನರ್ಹ ಶಾಸಕರ ಪ್ರಕರಣದಲ್ಲಿ ಭಾರತದ ಸವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿನಲ್ಲಿ ಸಭಾಧ್ಯಕ್ಷರ ವಿರುದ್ಧ ಯಾವುದೇ ಛೀಮಾರಿ ಹಾಕಿಲ್ಲ. ಬದಲಾಗಿ, ಸಭಾಧ್ಯಕ್ಷರ ಕ್ರಮ ಕುರಿತಂತೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಲಾಗಿದೆ. ಆದಕಾರಣ ತಮ್ಮ ಪದತ್ಯಾಗದ ಪ್ರಸ್ತಾಪ ಉದ್ಭವಿಸುವುದಿಲ್ಲ ಎಂದು ಬೋಪಯ್ಯ ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+