ನಿಗೂಢವಾಗಿಯೇ ಉಳಿದಿರುವ ಸಾಯಿಬಾಬಾ ಕೋಣೆ

Sai Baba
ಹೈದರಾಬಾದ್‌, ಜೂನ್ 2: ಪುಟ್ಟಪರ್ತಿ ಸಾಯಿಬಾಬಾ ನಿಧನರಾಗಿ ಆಗಲೇ ಒಂದು ತಿಂಗಳು ಕಳೆದಿದೆ. ಈ ಮಧ್ಯೆ, ಬಾಬಾ ಆಸ್ಪತ್ರೆ ಸೇರಿದಾಕ್ಷಣ ಮುಚ್ಚಿದ, ಅವರು ಸದಾ ಬಳಸುತ್ತಿದ್ದ ಯಜುರ್ ಮಂದಿರದ ಬಾಗಿಲು ಇನ್ನೂ ತೆರೆದಿಲ್ಲ. ಹಾಗಿದ್ದರೆ ಅದರೊಳಗೆ ಏನಿದೆ? ಭಾರಿ ಹಣದ ಖಜಾನೆ ಇರಬಹುದೇ? ಭಾರಿ ಪ್ರಮಾಣದ ಆಭರಣ ಸಂಪತ್ತು ಇಡಲಾಗಿದೆಯೇ?

ಇಂತಹ ಪ್ರಶ್ನೆಗಳು ಇದೀಗ ಎಲ್ಲೆಡೆ ಹರಿದಾಡುತ್ತಿವೆ. ಈ ಕೊಠಡಿಯ ಬೀಗಕ ಕೈ ಬಾಬಾರ ಆಪ್ತರಾಗಿದ್ದ ಸತ್ಯಜಿತ್‌ ಕೈಯಲ್ಲಿ ಇರುತ್ತಿತ್ತು. ಆದರೆ ಏ. 24ರಂದು ಬಾಬಾ ನಿಧನದ ಬಳಿಕ ಕೊಠಡಿಯ ಕೀಯನ್ನು ಸತ್ಯಜಿತ್‌, ಸತ್ಯಸಾಯಿ ಕೇಂದ್ರೀಯ ಟ್ರಸ್ಟ್‌ನ ಕಾರ್ಯದರ್ಶಿ ಕೆ. ಚಕ್ರವರ್ತಿ ಅವರಿಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.

ಅಂದಿನಿಂದಲೂ ಯಜುರ್ ಮಂದಿರಕ್ಕೆ ಭಾರೀ ಬಿಗಿ ಭದ್ರತೆ ಒದಗಿಸಲಾಗಿದೆ. ಹೀಗಾಗಿ ಕೊಠಡಿಯೊಳಗೆ ಭಾರೀ ಪ್ರಮಾಣದ ಹಣ, ಚಿನ್ನದ ಆಭರಣಗಳು ಇರಬಹುದು ಎಂಬ ಸಂಶಯ ಎಲ್ಲರಲ್ಲಿ ಮೂಡತೊಡಗಿದೆ. ಬಾಬಾ ಸಮಾಧಿ ನಿರ್ಮಾಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಶಾಂತಿ ನಿಲಯಂ ಅನ್ನು 6 ವಾರಗಳ ಕಾಲ ಮುಚ್ಚಲು ಟ್ರಸ್ಟ್‌ ಸದಸ್ಯರು ಈ ಹಿಂದೆ ನಿರ್ಧರಿಸಿದ್ದರು.

ಈ ಅವಧಿ ಮುಗಿಯುತ್ತಾ ಬಂದ ಹಿನ್ನೆಲೆಯಲ್ಲಿ ಟ್ರಸ್ಟ್‌ ಸದಸ್ಯರು ಇತ್ತೀಚೆಗೆ ಸಭೆ ಸೇರಿದ್ದರು. ಸಭೆಯಲ್ಲಿ ಮಂದಿರದ ಬಾಗಿಲನ್ನು ಸಾರ್ವಜನಿಕ ಎದುರು ತೆರೆಯಬೇಕೋ? ಬೇಡವೋ? ಎಂಬುದರ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಆದರೆ ಸಭೆಯಲ್ಲಿ ಟ್ರಸ್ಟ್‌ನ ಎಲ್ಲಾ ಸದಸ್ಯರು ಭಾಗಿಯಾಗಿರದ ಹಿನ್ನೆಲೆಯಲ್ಲಿ ಈ ಕುರಿತು ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳುವಲ್ಲಿ ಸಭೆ ವಿಫ‌ಲವಾಗಿದೆ. ಹೀಗಾಗಿ ಶೀಘ್ರವೇ ಇನ್ನೊಂದು ಸಭೆ ನಡೆಸಿ ಅಲ್ಲಿ ಮಂದಿರದ ಬಾಗಿಲು ತೆರೆಯುವ ಕ್ರಮದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಟ್ರಸ್ಟ್‌ನ ಸದಸ್ಯ ಆರ್‌.ಜೆ.ರತ್ನಾಕರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+