ನಾಲ್ಕನೇ ಬಾರಿ ವಿಶ್ವಾಸಮತ ಗೆದ್ದ ಯಡಿಯೂರಪ್ಪ
ಬೆಂಗಳೂರು,
ಜೂ 2: ರಾಜ್ಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಪ್ರತಿಪಕ್ಷವೊಂದು ವಿಧಾನಸಭೆ ಅಧಿವೇಶನಕ್ಕೆ ಬಹಿಷ್ಕಾರ ಹಾಕಿದ ಘಟನೆಯ ನಡುವೆ ಬಿಜೆಪಿ ಸರ್ಕಾರ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಇಂದು ಆರಂಭಗೊಂಡ 10 ದಿನಗಳ ಕಾಲದ ಅಧಿವೇಶನದಲ್ಲಿ ಪ್ರಮುಖ ವಿಪಕ್ಷ ಕಾಂಗ್ರೆಸ್ ಕೂಡಾ ಗೈರು ಹಾಜರಾಗುವ ಭೀತಿ ಎದುರಾಗಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಅಧಿವೇಶನದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಸದಸ್ಯರು ಮುಖ್ಯಮಂತ್ರಿ ಹಾಗೂ ಸ್ಪೀಕರ್ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. id="toptextpromo">ಅಗಲಿದ
ಗಣ್ಯರಿಗೆ ಸಂತಾಪ, ಶ್ರದ್ಧಾಂಜಲಿ ಸಲ್ಲಿಸಿದ ನಂತರ ಒಂದು ವಾಕ್ಯದ ನಿರ್ಣಯ ಕೈಗೊಂಡ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸದನದ ಮುಂದೆ ವಿಶ್ವಾಸಮತ ಯಾಚಿಸಿದರು. ಬಿಜೆಪಿ ಸರ್ಕಾರದ ಪರ 119 ಮತಗಳು ಲಭಿಸಿದ ಕಾರಣ ಯಡಿಯೂರಪ್ಪ ಮತ್ತೊಮ್ಮೆ ವಿಜಯಶಾಲಿಯಾದರು. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಹಡಗಲಿ ಶಾಸಕ ಚಂದ್ರಾನಾಯ್ಕ ಹಾಗೂ ವರ್ತೂರು ಪ್ರಕಾಶ್ ಅವರು ಗೈರು ಹಾಜರಾಗಿದ್ದರು. id='are-slot-1' class='oiad oi-axt oiadv'> id='top-searched-articles'>2008ರ
ಅಸೆಂಬ್ಲಿ ಚುನಾವಣೆಯಲ್ಲಿ ಜಯ ಗಳಿಸಿದ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಅಧಿಪತ್ಯ ಸ್ಥಾಪಿಸುವ ಸುವರ್ಣ ಅವಕಾಶ ಒದಗಿತು. 224 ಸೀಟುಗಳಿರುವ ವಿಧಾನಸಭೆಯಲ್ಲಿ 110 ಸೀಟುಗಳನ್ನು ಗಳಿಸಿದ ಬಿಜೆಪಿ 3 ಶಾಸಕರ ಕೊರತೆ ಅನುಭವಿಸಿತ್ತು. ಕೊನೆಗೆ 6 ಜನ ಪಕ್ಷೇತರ ಶಾಸಕರ ಬೆಂಬಲ ಪಡೆದು ಮೇ 30 ರಂದು ರಾಜ್ಯದಲ್ಲಿ ತನ್ನ ಅಧಿಕಾರ ಸ್ಥಾಪಿಸಿತು. 2008ರ ಜೂನ್ ತಿಂಗಳಿನಲ್ಲಿ, ಅಕ್ಟೋಬರ್ 11, 2010 ರಲ್ಲಿ 16 ಎಂಎಲ್ ಎಗಳು ಹಾಗೂ 11 ಬಿಜೆಪಿ ಭಿನ್ನಮತೀಯರು ಬೆಂಬಲ ಹಿಂಪಡೆದಾಗ ವಿಶ್ವಾಸ ಮತಯಾಚಿಸಿದ್ದರು. ನಂತರ ರಾಜ್ಯಪಾಲ ಭಾರದ್ವಾಜ್ ಅವರ ಆದೇಶದ ಮೇರೆಗೆ ವಿಶ್ವಾಸಮತ ಯಾಚಿಸಿದ ಯಡಿಯೂರಪ್ಪ ಧ್ವನಿಮತದ ಮೂಲಕ ವಿಜಯಿಯಾಗಿದ್ದರು.











Click it and Unblock the Notifications