ಸುಷ್ಮಾ ಹೇಳಿಕೆ: ಗಡ್ಕರಿ ಆಜ್ಞೆಯಂತೆ ರೆಡ್ಡೀಸ್ ಮೌನಕ್ಕೆ ಶರಣು
ಹರಪನಹಳ್ಳಿ
(ದಾವಣಗೆರೆ ಜಿಲ್ಲೆ) ಮೇ 31: ರೆಡ್ಡಿ ಸಹೋದರರ ಸಂಪುಟ ಸೇರ್ಪಡೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ನೀಡಿರುವ ಹೇಳಿಕೆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಯಾವುದೇ ಹೇಳಿಕೆ ನೀಡಬಾರದು ಎಂದು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂದು ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ ಸ್ಪಷ್ಟಪಡಿದ್ದಾರೆ. id="toptextpromo">ಇದೇ
ಸಂದರ್ಭದಲ್ಲಿ ಸುಷ್ಮಾ ಹೇಳಿಕೆಯಿಂದ ತಮಗೆ ಬೇಸರ, ಸಂತೋಷ ಅಥವಾ ನೋವು ಏನೂ ಆಗಿಲ್ಲ ಎಂದೂ ಅವರು ತಿಳಿಸಿದರು. ಸುದ್ದಿಗಾರರೊಂದಿಗೆ ಸೋಮವಾರ (ಮೇ 30) ಇಲ್ಲಿ ಮಾತನಾಡಿದ ಅವರು, ಸುಷ್ಮಾ ಸ್ವರಾಜ್ ಹಾಗೂ ತಮ್ಮ ಬಾಂಧವ್ಯ ಹಳಸಿದೆಯೆ ಎಂಬ ಪ್ರಶ್ನೆಗೂ ಉತ್ತರಿಸಲಿಲ್ಲ. id='are-slot-1' class='oiad oi-axt oiadv'> id='top-searched-articles'>ಈ
ಬಾರಿಯ ವರ ಮಹಾಲಕ್ಷ್ಮೀ ಪೂಜೆಗೆ ಬಳ್ಳಾರಿಗೆ ಬರುತ್ತಾರೆಯೇ ಎಂಬ ಪ್ರಶ್ನೆಗೆ, 'ಮುಂದೆ ನೋಡೋಣ. ಈ ಕುರಿತು ಏನನ್ನೂ ಕೇಳಬೇಡಿ. ನಾನು ಏನೂ ಹೇಳಲಾರೆ' ಎಂದಷ್ಟೇ ಉತ್ತರಿಸಿದರು.











Click it and Unblock the Notifications