ಪ್ಯಾರೀಸ್ ನಲ್ಲಿ ಪಂಜಾಬಿಗಳ ಬರ್ಬರ ಹತ್ಯೆ
ಪ್ಯಾರಿಸ್,
ಮೇ 30: ಹೊಟ್ಟೆಪಾಡಿಗೆ ಭಾರತದ ಪಂಜಾಬ್‌ನ ಇಬ್ಬರು ಯುವಕರನ್ನು ಫ್ರಾನ್ಸ್ ನಲ್ಲಿ ಉದ್ಯೋಗ ಅರಸಿ ಬಂದು ನೆಲೆಸಿದ್ದೇ ತಪ್ಪಾಯಿತು. ಪ್ಯಾರಿಸ್ ಸಮೀಪ ಅಪರಿಚಿತರ ಮಾರಾಣಾಂತಿಕ ದಾಳಿಗೆ ತುತ್ತಾಗಿ ಪಂಜಾಬಿ ಯುವಕರು ಶವವಾಗಿ ಭಾರತಕ್ಕೆ ಮರಳುತ್ತಿದ್ದಾರೆ. ಈ ಬಗ್ಗೆ ಸೋಮವಾರ ಮಾಧ್ಯಮಗಳಿಗೆ ಮೃತ ವ್ಯಕ್ತಿಯ ತಂದೆ ವಿವರ ನೀಡಿದರು. id="toptextpromo">ಕಳೆದ
ಶನಿವಾರ ಸಂಜೆ ಫ್ರಾನ್ಸ್‌ನಿಂದ ದೂರವಾಣಿ ಕರೆಯೊಂದು ಬಂದಾಗ, ಏನೂ ತೋಚದಾಯಿತು. ನನ್ನ ಮಗ ಜಸ್ಪಾಲ್ ಸಿಂಗ್(34) ಪ್ಯಾರೀಸ್ ನಲ್ಲಿ ಎಲೆಕ್ಟ್ರೀಷನ್ ಹುದ್ದೆ ನಿರ್ವಹಿಸುತ್ತಿದ್ದ, ಆತನ ಸ್ನೇಹಿತ ಮನ್‌ದೀಪ್ ಆಗಂತುಕರ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ನಮ್ಮದು ಪಂಜಾಬ್‌ನ ಸಂಗ್ರೂರ್ ಜಿಲ್ಲೆ, ಮನದೀಪ್ ಜಲಂಧರ್ ಕಡೆಯವನು, ಇನ್ನೊಬ್ಬ ಸ್ನೇಹಿತನಿಗೆ ಸಾಕಷ್ಟು ಗಾಯಗಳಾಗಿದ್ದು ಅಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಫ್ರೆಂಚ್ ಪೊಲೀಸರಿಂದ ತಿಳಿದು ಬಂದಿದೆ ಎಂದು ಜಸ್ಪಾಲ್ ತಂದೆ ಸೊಹಾನ್ ಸಿಂಗ್ ಸುದ್ದಿಗಾರರಿಗೆ ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>90
ಗಂಟೆಗಳ ಒಳಗೆ ಈ ಕೊಲೆ ಕೇಸ್ ತನಿಖೆ ಮುಗಿಸುವುದಾಗಿ ಹೇಳಿರುವ ಫ್ರೆಂಚ್ ಪೊಲೀಸರು, ಹತ್ಯೆಯ ಹಿಂದಿನ ಕಾರಣ ಹುಡುಕ ತೊಡಗಿದ್ದಾರೆ. ಮೃತ ಜಸ್ಪಾಲ್ ಅವರ ಕುಟುಂಬ ಹಾಗೂ ಗ್ರಾಮಸ್ಥರ ಒತ್ತಾಯದ ಮೇರೆಗೆ ಮೃತ ಯುವಕರ ಶವಗಳನ್ನು ಭಾರತಕ್ಕೆ ತರಲು ಏರ್ಪಾಟು ಮಾಡಲಾಗಿದೆ. ಭಾರತೀಯ ರಾಯಭಾರ ಕಚೇರಿ ಜೊತೆ ಸಂಪರ್ಕದಲ್ಲಿದ್ದು ಶೀಘ್ರದಲ್ಲೇ ಶವಗಳನ್ನು ಪಂಜಾಬ್ ಗೆ ತಂದು ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಪಂಜಾಬ್ ನ ಸಚಿವ ಪರ್ಮೀಂದರ್ ಸಿಂಗ್ ಹೇಳಿದ್ದಾರೆ.











Click it and Unblock the Notifications