ಒಳ ಉಡುಪು ಕಂಪನಿಗೆ 17 ಲಕ್ಷ ರು. ಪಂಗನಾಮ

ಆತ ವಂಚನೆ ಮಾಡಿದ ರೀತಿಯೇ ಪೂರ್ತಿ ಡಿಫರೆಂಟ್. ಹೇಗೋ ಕಂಪನಿಯ ಲೆಕ್ಕಚಾರ ನೋಡುವ ಸಹಾಯಕ ಅಕೌಂಟೆಟ್ ಆತ. ಆತ ಉದ್ಯೋಗಿಗಳ ಹೆಸರಿನ ಪಟ್ಟಿಗೆ ತನ್ನ ಲೆಕ್ಕದಲ್ಲಿ ಬೋಗಸ್ ಸಿಬ್ಬಂದಿ ಹೆಸರನ್ನು ಸೇರಿಸಿಬಿಟ್ಟ.
ಆತನಿಗಾಗಿ ಬ್ಯಾಂಕ್ ಖಾತೆಯೊಂದನ್ನು ಸೃಷ್ಟಿಸಿದ. ಪ್ರತಿತಿಂಗಳು ಆ ಖಾತೆಗೆ ವೇತನ ಜಮಾ ಮಾಡುತ್ತಿದ್ದ. ಪ್ರತಿತಿಂಗಳು ಬೋಗಸ್ ಖಾತೆಯಿಂದ ಹಣ ಡ್ರಾ ಮಾಡುತ್ತಿದ್ದ.
ಗಿರಿರಾಜ್ ಈ ರೀತಿ ವಂಚಿಸಿದ್ದು ಕೆಲವು ತಿಂಗಳಲ್ಲ. ಬರೋಬ್ಬರಿ ಮೂರು ವರ್ಷಗಳ ಕಾಲ ಬೋಗಸ್ ಸಿಬ್ಬಂದಿ ಹೆಸರಿನಲ್ಲಿ ಹಣ ಪಡೆದ. ಆದರೆ ಮೊನ್ನೆ ಹಣಕಾಸು ಲೆಕ್ಕಚಾರ ಮಾಡುತ್ತಿದ್ದಾಗ ಬೋಗಸ್ ಖಾತೆಯೊಂದಕ್ಕೆ ಹಣ ವರ್ಗಾವಣೆಯಾಗುವುದು ಕಂಪನಿಯ ಗಮನಕ್ಕೆ ಬಂತು.
ಯಾವಾಗ ಕಂಪನಿ ಈ ಕುರಿತು ತನಿಖೆ ಮಾಡಲು ಆರಂಭಿಸಿತೋ ಗಿರಿರಾಜ್ ನಾಪತ್ತೆಯಾಗಿಬಿಟ್ಟ. ಕಂಪನಿ ಈಗ ಪೋಲಿಸರಿಗೆ ಕಂಪ್ಲೇಟ್ ನೀಡಿದೆ. ಇಂತಹ ವಿರಳ ಪ್ರಕರಣ ನೋಡಿ ಪೋಲಿಸರಿಗೂ ಅಚ್ಚರಿಯಾಯ್ತು.
ಮೂರು ವರ್ಷದಿಂದ ಒಬ್ಬ ಈ ರೀತಿ ವಂಚನೆ ಮಾಡಲು ಸಾಧ್ಯವೇ? ಆತನೊಂದಿಗೆ ಈ ವಂಚನೆಯಲ್ಲಿ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬುದನ್ನು ಪೋಲಿಸರು ತನಿಖೆ ಮಾಡುತ್ತಿದ್ದಾರೆ.












Click it and Unblock the Notifications