ಬೆಂಗಳೂರು: ಹಾಡಹಗಲೇ ಕಾರಿನಲ್ಲಿ 35 ಲಕ್ಷ ರು. ದರೋಡೆ

ದರೋಡೆಗೊಳಗಾದ ಮಾರುತಿ ಕಾರಿನಲ್ಲಿ ಶಿವ ಟ್ರೇಡರ್ಸ್ ಸಂಸ್ಥೆಯ ಕೃಷ್ಣಾರೆಡ್ಡಿ ಸೇರಿದಂತೆ ನಾಲ್ವರು ಉದ್ಯೋಗಿಗಳು ಇದ್ದರು. ಸಿಲ್ಕ್ ಬೋರ್ಡ್ ಬಳಿ ಬ್ಯಾಂಕಿಗೆ ಜಮಾ ಮಾಡಲು ಇಷ್ಟೊಂದು ಭಾರಿ ಮೊತ್ತದ ನಗದನ್ನು ಅವರು ತೆಗೆದುಕೊಂಡು ಹೋಗುತ್ತಿದ್ದರು.
ಮಹಾರಾಷ್ಟ್ರ ನೋಂದಣಿಯ ಕಪ್ಪು ಬಣ್ಣದ ಕಾರಿನಲ್ಲಿ ಹಿಂದಿನಿಂದ ಬಂದ ದುಷ್ಕರ್ಮಿಗಳು ಶಿವ ಟ್ರೇಡರ್ಸ್ ಸಂಸ್ಥೆಗೆ ಸೇರಿದ ಕಾರನ್ನು ತಡೆದು, ಈ ಕೃತ್ಯವೆಸಗಿದ್ದಾರೆ. ಇಂಡಿಕಾ ಕಾರಿನಕಲ್ಲಿ ಬಂದ ದರೋಡೆಕೋರರು ಮೊದಲು ಕೃಷ್ಣಾರೆಡ್ಡಿ ಅವರ ಕಾರಿನ ಮುಂಭಾಗದ ಗಾಜನ್ನು ಒಡೆದು, ಒಳಗಿದ್ದವರ ಮೇಲೆ ಖಾರದ ಪುಡಿ ಎರೆಚಿದ್ದಾರೆ. ತಕ್ಷಣ ಹಿಂದಿನ ಸೀಟಿನಲ್ಲಿದ್ದ ಸೂಟ್ ಕೇಸನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ.
ಕಾರು ಚಾಲಕನ ಪ್ರಕಾರ ದರೋಡೆಕೋರು ಅಪರಿಚಿತರು ಎಂದು ತಿಳಿದುಬಂದಿದೆ. ಹಣ ದೋಚುತ್ತಿದ್ದಂತೆ ದುಷ್ಕರ್ಮಿಗಳು ಹೊಸೂರಿನತ್ತ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಪೊಲೀಸರು ನಾಕಾಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.












Click it and Unblock the Notifications