ಕೇರಳ ಚುಂಬಿಸಿದ ಮುಂಗಾರು, ರಾಜ್ಯದಲ್ಲಿ ಸದ್ಯದಲ್ಲೇ ಮಳೆ

monsoon 2011
ಬೆಂಗಳೂರು, ಮೇ 30: ಜೂನ್ 1 ಅಥವಾ 2ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ. ಮೇ 31ರಂದು ಕೇರಳಕ್ಕೆ ಪ್ರವೇಶಿಸಲಿರುವ ನೈರುತ್ಯ ಮಾರುತಗಳು, ಎರಡು ದಿನಗಳ ನಂತರ ರಾಜ್ಯಕ್ಕೆ ಕಾಲಿರಿಸಲಿವೆ. 2010 ರಲ್ಲಿ ರಾಜ್ಯದಲ್ಲಿ 890 ಮಿ.ಮೀ. ಮಳೆಯಾಗಿದೆ. ಈ ಬಾರಿ ಸುಮಾರು 800 ಮಿ.ಮೀ. ಸರಾಸರಿ ಮಳೆಯಾಗುವ ಸಂಭವವಿದೆ.

ವಿವಿಧ ಹವಾಮಾನ ಮುನ್ಸೂಚನಾ ಇಲಾಖೆಗಳ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಈ ವರ್ಷ ಶೇ 96ರಷ್ಟು ಮಳೆಯಾಗುವ ನಿರೀಕ್ಷೆ ಇದೆ. ಅಂದರೆ, ವಾಡಿಕೆ ಮಳೆಗೆ ಹತ್ತಿರವಾಗಿ ಮಳೆ ಬೀಳುವ ಸೂಚನೆಗಳಿವೆ' ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಬಿ.ರಾಜೇಗೌಡ ತಿಳಿಸಿದ್ದಾರೆ.

ಈಗಾಗಲೇ ದಕ್ಷಿಣ ಅರೇಬಿಯನ್‌ ಸಮುದ್ರ, ಬಂಗಾಳ ಕೊಲ್ಲಿಯ ದಕ್ಷಿಣ ಭಾಗ, ದಕ್ಷಿಣ ಅಂಡಮಾನ್‌ ಪ್ರದೇಶ, ಕೇರಳ ಮತ್ತು ತಮಿಳ್ನಾಡಿನ ಕೆಲವು ಭಾಗಗಳಲ್ಲಿ ಮುಂಗಾರು ಮಳೆ ಮೋಡಗಳು ದಟ್ಟೈಸಿವೆ. ಮುಂದಿನ ಎರಡು ಮೂರು ದಿನಗಳೊಳಗೆ ಕೇರಳ, ತಮಿಳುನಾಡಿನ ಕೆಲವು ಭಾಗಗಳು ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲೂ ಮಳೆ ಮೋಡಗಳು ದಟ್ಟವಾಗಿ ಮಳೆ ಆರಂಭವಾಗಲಿದೆ ಎಂದು ಇಲಾಖೆ ಹೇಳಿದೆ.

ಮೇ 31ರಂದು ಕೇರಳಕ್ಕೆ ಮಳೆರಾಯನ ಆಗಮನವಾಗಲಿದೆ ಎಂದು ಹವಾಮಾನ ಇಲಾಖೆ ಕೆಲವು ದಿನ ಹಿಂದೆಯೇ ಮುನ್ಸೂಚನೆ ನೀಡಿತ್ತು. ಕೇರಳಕ್ಕೆ ಮಳೆ ಕಾಲಿರಿಸುವುದರೊಂದಿಗೆ ದಕ್ಷಿಣ ಭಾರತಕ್ಕೆ ಮಳೆಗಾಲ ಆರಂಭವಾಯಿತೆಂದೇ ಅರ್ಥ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+