ಬೆಂಗಳೂರಿನಲ್ಲಿ ಮತ್ತೆ ಒಂಟಿ ಮಹಿಳೆ ಕೊಲೆ

ಲೇಔಟ್‌ನ ಒಂದನೇ ಅಡ್ಡ ರಸ್ತೆಯಲ್ಲಿ ವಾಸವಿರುವ ಕಿರಣ್ ಎಂಬುವರ ತಾಯಿ ರಾಜಮ್ಮ (48) ಕೊಲೆಯಾದವರು. ರಾಜಮ್ಮ ಅವರ ಪತಿ ಬಸವರೆಡ್ಡಿ ಅವರು 2010ರಲ್ಲಿ ಹಾಗೂ ಮತ್ತೊಬ್ಬ ಪುತ್ರ ಮಂಜುನಾಥ್ 2006ರಲ್ಲಿ ಸಾವನ್ನಪ್ಪಿದ್ದರು. ರಾಜಮ್ಮ ಅವರು ಮಗ ಕಿರಣ್ ಮತ್ತು ಸೊಸೆ ನವ್ಯಾ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕಿರಣ್ ಅವರು ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ.
ನವ್ಯಾ ಅವರಿಗೆ ಕೆಲ ತಿಂಗಳ ಹಿಂದೆ ಹೆರಿಗೆಯಾಗಿದ್ದು, ಅವರು ಬಿಡದಿ ಸಮೀಪ ಇರುವ ತಾಯಿ ಮನೆಗೆ ಹೋಗಿದ್ದರು. ಸಂಬಂಧಿಕರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಿರಣ್ ಅವರು ಗುರುವಾರ ಸಂಜೆ ಹಾಸನಕ್ಕೆ ಹೋಗಿದ್ದರು. ಹಾಗಾಗಿ ರಾಜಮ್ಮ ಅವರೊಬ್ಬರೇ ಮನೆಯಲ್ಲಿದ್ದರು. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಅವರ ಮನೆಗೆ ಬಂದು ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ತಾಯಿಯ ಮೊಬೈಲ್‌ಗೆ ಕರೆ ಮಾಡಿ ಮಾತನಾಡಿದ್ದೆ' ಎಂದು ಕಿರಣ್ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ. ನವ್ಯಾ ದಂಪತಿ ರಾಜಮ್ಮ ಅವರ ಮೊಬೈಲ್‌ಗೆ ಶುಕ್ರವಾರ ಬೆಳಗ್ಗೆ ಹಲವು ಬಾರಿ ಕರೆ ಮಾಡಿದರೂ ಅವರು ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ನವ್ಯಾ ಅವರು ಪಕ್ಕದ ಮನೆಯವರಿಗೆ ಕರೆ ಮಾಡಿ ತಮ್ಮ ಮನೆಗೆ ಹೋಗಿ ನೋಡುವಂತೆ ತಿಳಿಸಿದರು. ಅಂತೆಯೇ ಪಕ್ಕದ ಮನೆಯವರು ನವ್ಯಾ ಅವರ ಮನೆಗೆ ಹೋಗಿ ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ' ಎಂದು ಪೊಲೀಸರು ಹೇಳಿದ್ದಾರೆ.
ಅಡುಗೆ ಕೋಣೆಯಲ್ಲಿ ಚಪಾತಿ, ಕಬಾಬ್ ಇತರೆ ತಿಂಡಿ ಪದಾರ್ಥಗಳನ್ನು ಅರ್ಧಂಬರ್ಧ ಸೇವಿಸಿದ ಗುರುತುಗಳಿದ್ದು, ಪರಿಚಿತ ವ್ಯಕ್ತಿಗಳೇ ಕೊಲೆ ಮಾಡಿರುವ ಶಂಕೆ ಇದೆ. ಮನೆಯ ಮೊದಲ ಮಹಡಿಯಲ್ಲಿರುವ ಮಲಗುವ ಕೋಣೆಯಲ್ಲಿ ರಾಜಮ್ಮ ಅವರ ಶವ ಪತ್ತೆಯಾಗಿದ್ದು, ಅಲ್ಲಿಯೇ ಮದ್ಯದ ಬಾಟಲಿಗಳು ಸಹ ಸಿಕ್ಕಿವೆ. ಕೊಲೆಗಾರರು ಮನೆಯ ಅಲ್ಮೆರಾದಲ್ಲಿದ್ದ ಯಾವುದೇ ಆಭರಣಗಳನ್ನು ತೆಗೆದುಕೊಂಡು ಹೋಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರು, ಇಬ್ಬರು ಮೂವರು ಒಟ್ಟಾಗಿ ಸೇರಿಕೊಂಡು ಈ ಕೊಲೆ ಮಾಡಿರುವ ಸಾಧ್ಯತೆ ಇದೆ' ಎಂದರು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ. ಸುನಿಲ್‌ಕುಮಾರ್, ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications