ಆಪರೇಷನ್ ಕಮಲ ಮುಂದುವರೆಯಲಿದೆ: ಈಶ್ವರಪ್ಪ

Operation Kamala in Karnataka
ಮಂತ್ರಾಲಯ, ಮೇ 29: ಆಪರೇಷನ್ ಕಮಲ ಇನ್ನಿಲ್ಲವೆಂಬ ಯಡಿಯೂರಪ್ಪ ಮಾತು ಕಿವಿಯಿಂದ ಮಾಯವಾಗುವ ಮುನ್ನವೇ ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಎಸ್ ಈಶ್ವರಪ್ಪ ಹೊಸ ಪಟಾಕಿ ಸಿಡಿಸಿದ್ದಾರೆ.

ಕರ್ನಾಟಕದಲ್ಲಿ ಆಪರೇಷನ್ ಕಮಲ ಮುಂದುವರೆಯಲಿದೆ ಎಂದು ಅವರು ಇಂದು ಹೇಳಿದ್ದಾರೆ. ಮಂತ್ರಾಲಯದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತ "ಬಿಜೆಪಿ ಸಿದ್ದಾಂತ ಯಾರಿಗೆ ಇಷ್ಟವಾಗುತ್ತದೋ ಅವರೆಲ್ಲರನ್ನು ಪಕ್ಷ ಸ್ವಾಗತಿಸುತ್ತದೆ" ಎಂದರು.

ಇನ್ನು ರಾಜ್ಯದಲ್ಲಿ ಆಪರೇಷನ್ ಕಮಲ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇತ್ತೀಚೆಗೆ ಹೇಳಿದ್ದರು. ಇದರಿಂದಾಗಿ ಈಶ್ವರಪ್ಪ ಹೊಸ ಹೇಳಿಕೆ ಹಲವರ ಹುಬ್ಬೇರಿಸುವಂತೆ ಮಾಡಿದೆ.

ಈ ಹೇಳಿಕೆ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಸಾಕಷ್ಟು ಗೊಂದಲಕ್ಕೆ ದೂಡಿದೆ. ಇದೇ ರೀತಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯದಲ್ಲಿ ಇನ್ಯಾರು ಕಮಲದ ಕರೆಗೆ ಓಡಲಿದ್ದಾರೆ ಎಂದು ಚಿಂತೆಗೀಡಾಗಿದ್ದಾರೆ. ಈಶ್ವರಪ್ಪ ಹೇಳಿಕೆಗೆ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+