ಬೆಂಗಳೂರು ಮುಂದು: ರಾಜ್ಯಕ್ಕೆ 200 ಹೊಸ ಪಿಯು ಕಾಲೇಜ್

ಇವುಗಳಲ್ಲಿ ಹೆಚ್ಚಿನವುಗಳಿಗೆ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅನುಮತಿ ನೀಡಿಯಾಗಿದೆ ಎಂದು ಮೂಲಗಳು ಹೇಳುತ್ತಿವೆ. ಪ್ರಸಕ್ತ ವರ್ಷದಿಂದ ಕೋರ್ಸ್ ಆರಂಭಿಸಲು ಸುಮಾರು 170 ಕಾಲೇಜುಗಳಿಗೆ ಕಾಗೇರಿ ಅನುಮತಿ ನೀಡಿದ್ದಾರೆ. ಮುಂದಿನ ವಾರ ಇನ್ನಷ್ಟು ಕಾಲೇಜುಗಳಿಗೆ ಅನುಮತಿ ದೊರಕಲಿದೆ ಎಂದು ಮೂಲಗಳು ಹೇಳಿವೆ.
"ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಸರಕಾರಿ ಪಿಯು ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ. ಹೀಗಾಗಿ ಈ ವರ್ಷ ಸರಕಾರಿ ಕಾಲೇಜುಗಳ ನಿರ್ಮಾಣಕ್ಕೆ ಯಾವುದೇ ಪ್ರಸ್ತಾಪಗಳು ಬಂದಿಲ್ಲ. ಈ ವರ್ಷ ನಾವು ಯಾವುದೇ ಸರಕಾರಿ ಪಿಯು ಕಾಲೇಜು ಆರಂಭಿಸುವಿದಲ್ಲ" ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೆಂಗಳೂರು ಮುಂದು: ಪಿಯುಸಿ ಕೋರ್ಸ್ ಆರಂಭಿಸಲು ಅನುಮತಿ ಕೋರಿರುವ ಅಪ್ಲಿಕೇಷನ್ ಗಳಲ್ಲಿ ಹೆಚ್ಚಿನವು ಬೆಂಗಳೂರಿನಿಂದ ಬಂದಿವೆ. 250 ಅಪ್ಲಿಕೇಷನ್ ಗಳಲ್ಲಿ 150 ಅಪ್ಲಿಕೇಷನ್ ಗಳು ಬೆಂಗಳೂರಿನಿಂದ ಬಂದಿದೆ. ಧಾರವಾಡದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಅಪ್ಲಿಕೇಷನ್ ಗಳು ಬಂದಿವೆ.











Click it and Unblock the Notifications