ಟಿ ಬೇಗೂರು ರೈತರ ಸ್ಪಂದನೆಯಿಂದ ಪುಳಕಿತರಾದ ಅಣ್ಣಾ

Anna Hazare
ಬೆಂಗಳೂರು, ಮೇ 27 : ಭ್ರಷ್ಟಾಚಾರವನ್ನು ಮೂಲದಿಂದ ಕಿತ್ತೊಗೆಯಲು ಮಾಗಿದ ವಯಸ್ಸು ಮತ್ತು ಅನಾರೋಗ್ಯವನ್ನು ಬಿದಿಗಿಟ್ಟು ಹೋರಾಟ ನಡೆಸುತ್ತಿರುವ ಸಮಾಜ ಸೇವಕ ಅಣ್ಣಾ ಹಜಾರೆ ಬೆಂಗಳೂರಿಗೆ ಬಂದಿಳಿದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಟಿ ಬೇಗೂರು ಗ್ರಾಮದಲ್ಲಿ ಶುಕ್ರವಾರ ರೈತರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಇನ್ನೊಬ್ಬ ಸಮಾಜ ಚಿಂತಕ ಮತ್ತು ಜನ ಲೋಕಪಾಲ ಮಸೂದೆ ಸಮಿತಿಯಲ್ಲಿರುವ ಸ್ವಾಮಿ ಅಗ್ನಿವೇಶ್ ಜೊತೆ ಬಂದಿರುವ ಅಣ್ಣಾ ಹಜಾರೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ನೆಲಮಂಗಲಕ್ಕೆ ಸಾಗಿದರು. ರೈತರ ಸ್ಪಂದನೆಯಿಂದ ಪುಳಕಿತರಾಗಿರುವ ಅಣ್ಣಾ ಹಜಾರೆ ಮಸೂದೆ ಮಂಡನೆಯಾಗುವವರೆಗೆ ವಿಶ್ರಮಿಸುವುದಿಲ್ಲ, ಭ್ರಷ್ಟಾಚಾರದ ವಿರುದ್ಧ ತಮ್ಮ ಹೋರಾಟ ನಿರಂತರ ಎಂದು ಹೇಳಿದ್ದಾರೆ.

ಅಣ್ಣಾ ಹೋರಾಟಕ್ಕಾಗಿ ಹಣದ ಜೊತೆಗೆ ಜನಬಲವೂ ಸೇರಿಕೊಳ್ಳುತ್ತಿದೆ. ಅಣ್ಣಾ ಬೆಂಗಳೂರಿನಲ್ಲಿ ಮೇ 28ರ ಶನಿವಾರದಂದು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆಟೋ ಚಾಲಕರು, ಕಾರ್ಮಿಕರು ಸೇರಿದಂತೆ ಭ್ರಷ್ಟಾಚಾರ ವಿರೋಧಿಸುವ ಬೆಂಗಳೂರಿಗರು ನಾಳೆಯ ಕಾರ್ಯಕ್ರಮದ ಆಯೋಜನೆಗಾಗಿ ಈಗಾಗಲೆ 60 ಸಾವಿರ ರು.ಗೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದಾರೆ. ಸಾಕು ಎಂಬ ಸಂಸ್ಥೆ ಸಾರ್ವಜನಿಕ ಸಭೆಯನ್ನು ಆಯೋಜಿಸಿದೆ.

ಲೈಂಗಿಕ ಕಾರ್ಯಕರ್ತರಿಗೆ ಅಣ್ಣಾ ಬೆಂಬಲ : ಹೋರಾಟ ಯಾವುದಾದರೇನು, ನ್ಯಾಯವಾಗಿದ್ದರೆ ಸಾಕು ಮತ್ತು ನ್ಯಾಯಕ್ಕಾಗಿದ್ದರೆ ಸಾಕು ಎಂದು ನಂಬಿರುವ ಅಣ್ಣಾ ಹಜಾರೆ ಲೈಂಗಿಕ ಕಾರ್ಯಕರ್ತರ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ರೇಡಿಯೋ ಒಂದರಲ್ಲಿ ಲೈಂಗಿಕ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಅಣ್ಣಾ ಜೀವನಕ್ಕಾಗಿ ನೀವು ನಡೆಸುತ್ತಿರುವ ಹೋರಾಟ ಯಾವತ್ತಿಗೂ ನಿಲ್ಲಿಸಬೇಡಿ ಎಂದು ಕರೆ ನೀಡಿದ್ದಾರೆ.

ದೆಹಲಿಯಲ್ಲಿ ಅಣ್ಣಾ ಹಜಾರೆಯವರು ಲೋಕಪಾಲ ಮಸೂದೆ ಮಂಡನೆಗಾಗಿ ಆಮರಣಾಂತ ಉಪವಾಸ ಕುಳಿತಿದ್ದಾಗ ಮಹಾರಾಷ್ಟ್ರದ ಔರಾಂಗಾಬಾದ್ ನ ಕೆಲ ಲೈಂಗಿಕ ಕಾರ್ಯಕರ್ತರು ತಮ್ಮ ಬೆಂಬಲ ವ್ಯಕ್ತಪಡಿಸಿ ಅವರೊಂದಿಗೆ ಉಪವಾಸ ಕುಳಿತಿದ್ದರು. ಆಗ ಅವರಿಗೆ ನೀಡಿದ್ದ ವಾಗ್ದಾನ ಉಳಿಸಿಕೊಂಡಿರುವ ಹಜಾರೆ ಔರಂಗಾಬಾದ್ ಲೈಂಗಿಕ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ, ಅವರ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+