ರಾಜಕಾರಣಿಗಳೇನು ವಿಶ್ವದರ್ಜೆಯವರೇ? ಸಚಿವ ರಮೇಶ್ ಗೆ ತಿರುಗೇಟು

ದೇಶಾದ್ಯಂತ ಇಡೀ ಐಐಟಿ, ಐಐಎಂಗಳ ಬೋಧಕ ವೃಂದ ರಮೇಶ್ ವಿರುದ್ಧ ತಿರುಗಿಬಿದ್ದಿದೆ. ಆದರೆ ಈ ಸಂದರ್ಭದಲ್ಲಿ ರಮೇಶ್ ಅವರ ಮಾತಿನಲ್ಲಿ ಹುರುಳಿಲ್ಲವೇ ಎಂಬ ಪ್ರಶ್ನೆಯೂ ಮೂಡಿದೆ.
'ಪ್ರಯೋಜನಕ್ಕೆ ಬರುವ ಸಂಶೋಧನೆಗಳು ಐಐಟಿಗಳಲ್ಲಿ ನಡೆಯುವುದು ಕಡಿಮೆ. ಅಲ್ಲಿ ಪಾಠ ಮಾಡುವವರು ವಿಶ್ವದರ್ಜೆಯವರಲ್ಲ. ಐಐಟಿ ಮತ್ತು ಐಐಎಂಗಳು ಏಕೆ ಇಷ್ಟು ಪ್ರತಿಷ್ಠೆ ಹೊಂದಿವೆ ಅಂದರೆ ಅಲ್ಲಿ ಓದುವ ವಿದ್ಯಾರ್ಥಿಗಳು ಹಾಗಿರುತ್ತಾರೆ' ಎಂದು ರಮೇಶ್ ಕಿಡಿಹೊತ್ತಿಸಿದ್ದರು.
ದೆಹಲಿ ಐಐಟಿಯ ಹೊರಿಯ ಪ್ರೊಫೆಸರ್ ಡಾ. ಸಂಜೀವ್ ಸಾಂಘಿ ರಮೇಶ್ ಹೇಳಿಕೆ ಬಗ್ಗೆ ಕ್ರೋಧ, ಅಸಮಾಧಾನ ವ್ಯಕ್ತಪಡಿಸುತ್ತಾದಾದರೂ ಈ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕಮಟ್ಟದ ಅಭಿವೃದ್ಧಿಗೆ ಅವಕಾಶವಿದೆ ಎಂಬ ಮಾತನ್ನು ಒಪ್ಪುತ್ತಾರೆ. 'ನಮಗೆ ನಮ್ಮದೇ ಆದ ಒಂದಷ್ಟು ತೊಡಕುಗಳೂ ಇವೆ. ಎಲ್ಲದಕ್ಕೂ ಸರಕಾದರ ಮರ್ಜಿಗಾಗಿ ಕಾಯುತ್ತಾ ಕೂರಬೇಕು' ಎನ್ನುತ್ತಾರೆ ಸಾಂಘಿ.
ಈ ಮಧ್ಯೆ, ದೇಶದ ಶಿಕ್ಷಣ ಕ್ಷೇತ್ರದಲ್ಲಿನ ಆಗುಹೋಗುಗಳ ಹೊಣೆಹೊತ್ತಿರುವ ಸಚಿವ ಕಪಿಲ್ ಸಿಬಲ್ ತಮ್ಮ ಸಹೋದ್ಯೋಗಿಯ ಮಾತಿಗೆ ಸಹಮತ ವ್ಯಕ್ತಪಡಿಸಿಲ್ಲವಾದರೂ ರಮೇಶ್ ಹೇಳಿಕೆ ಬಗ್ಗೆ ಚರ್ಚೆ ನಡೆಯಲಿ ಎಂದು ಆಶಿಸಿದ್ದಾರೆ. ಶಿಕ್ಷಕರಷ್ಟೇ ಏಕೆ, ಶಿಕ್ಷಣ ಸಂಸ್ಥೆಗಳೂ ವಿಒಶ್ವದರ್ಜೆಯಲ್ಲಿಲ್ಲ. ಟಾಪ್ 100-150ರ ಸ್ಥಾನವೂ ಇಲ್ಲ. ಆದರೆ ಹೀಗೇಕೆ ಎಂದು ನಾವೇ ಪ್ರಶ್ನೆ ಹಾಕಿಕೊಳ್ಳಬೇಕಿದೆ.












Click it and Unblock the Notifications