ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಇಸ್ಕಾನ್‌ ಶಾಖೆ ಮುಂಬೈ ಸುಪರ್ದಿಗೆ

By Srinath
|
Google Oneindia Kannada News

Bangalore Iskcon
ಬೆಂಗಳೂರು, ಮೇ 24: ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾಂಶಿಯಸ್ ನೆಸ್ (ISKCON) ಗೆ ಸೇರಿದ ಬೆಂಗಳೂರು ಮತ್ತು ಮುಂಬೈ ಶಾಖೆಗಳ ನಡುವಣ ವ್ಯಾಜ್ಯ ಪರಿಹಾರಗೊಂಡಿದೆ. ಬೆಂಗಳೂರು ಇಸ್ಕಾನ್‌ ಒಡೆತನ ವಿಷಯದಲ್ಲಿ ದಶಕದಿಂದ ನಡೆದ ಕಾನೂನು ಹೋರಾಟ ಸೋಮವಾರ ಅಂತ್ಯಕಂಡಿದೆ. ಮಧುಪಂಡಿತ್‌ ದಾಸ್‌ ಮತ್ತು ಚಂಚಲಪತಿ ದಾಸ್‌ ಅವರಿಗೆ ತೀವ್ರ ಹಿನ್ನಡೆಯುಂಟಾಗಿದ್ದು, ಮುಂಬೈ ಶಾಖೆಗೆ ರಾಜ್ಯ ಹೈಕೋರ್ಟ್‌ನಲ್ಲಿ ಜಯ ದೊರೆತಿದೆ.

ಇಸ್ಕಾನ್‌ ಬೆಂಗಳೂರು ಶಾಖೆ ಮುಂಬೈ ಒಡೆತನಕ್ಕೆ ಸೇರಿದರೂ, ಮಧುಪಂಡಿತ್‌ ದಾಸ್‌ ಅಧ್ಯಕ್ಷರಾಗಿ ಹಾಗೂ ಚಂಚಲಪತಿ ದಾಸ್‌ ಉಪಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಆದರೆ ಇಸ್ಕಾನ್‌ ದೇವಸ್ಥಾನದ ನಿರ್ವಹಣೆ ಹಾಗೂ ಲೆಕ್ಕಪತ್ರ ಪರಿಶೀಲನೆ ಮೇಲೆ ಮುಂಬೈ ಶಾಖೆಯ ಸುಪರ್ದಿಯಲ್ಲಿರುತ್ತದೆ. 1998ಕ್ಕೂ ಹಿಂದೆ ಇಸ್ಕಾನ್‌ ಬೆಂಗಳೂರು ಶಾಖೆಗೆ ಸಂಬಂಧಿಸಿದಂತೆ ಮುಂಬೈ ಶಾಖೆ ಅನುಸರಿಸುತ್ತಿದ್ದ ನಿಯಮಗಳು ಇಂದಿನಿಂದ ಮತ್ತೆ ಜಾರಿಯಲ್ಲಿರುತ್ತವೆ ಎಂದು ತೀರ್ಪಿನಲ್ಲಿ ಉಲ್ಲೇಖೀಸಲಾಗಿದೆ.

ಇಸ್ಕಾನ್‌ ದೇವಸ್ಥಾನದ ಬೆಂಗಳೂರು ಶಾಖೆಯ ನಿರ್ವಹಣೆಗೆ ಸಂಬಂಧಿಸಿದಂತೆ 1998ರಿಂದ ವಿವಿಧ ಹಂತದ ನ್ಯಾಯಾಲಯಗಳಲ್ಲಿ ಬೆಂಗಳೂರು ಹಾಗೂ ಮುಂಬೈ ಶಾಖೆಗಳು ಕಾನೂನು ಹೋರಾಟ ನಡೆಸುತ್ತಿದ್ದವು. ಕಳೆದ 2009ರ ಏಪ್ರಿಲ್‌ 17 ರಂದು 9ನೇ ಸಿಟಿ ಸಿವಿಲ್‌ ನ್ಯಾಯಾಲಯ ಇಸ್ಕಾನ್‌ ದೇವಸ್ಥಾನದ ಬೆಂಗಳೂರು ಶಾಖೆ ಮಧುಪಂಡಿತ್‌ ದಾಸ್‌ ಅಧ್ಯಕ್ಷರಾಗಿರುವ ಬೆಂಗಳೂರು ನೋಂದಾಯಿತ ಸೊಸೈಟಿಗೆ ಸೇರಿದ್ದೆಂದು ತೀರ್ಪು ನೀಡಿತ್ತು. ಈ ಸೊಸೈಟಿಯಲ್ಲಿ ಚಂಚಲಪತಿ ದಾಸ್‌ ಉಪಾಧ್ಯಕ್ಷರಾಗಿದ್ದು, ಅವರ ಕುಟುಂಬ ಸದಸ್ಯರು ಪ್ರಧಾನ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ ಹಾಗೂ ಖಜಾಂಚಿಯಾಗಿ ನೇಮಕಗೊಂಡಿದ್ದರು.

ಸಿಟಿ ಸಿವಿಲ್‌ ಕೋರ್ಟ್‌ ತೀರ್ಪು ಪ್ರಶ್ನಿಸಿ ಮುಂಬೈ ಶಾಖೆ ರಾಜ್ಯ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇಸ್ಕಾನ್‌ ದೇವಸ್ಥಾನದ ಬೆಂಗಳೂರು ಶಾಖೆಯ ಒಡೆತನಕ್ಕೆ ಸಂಬಂಧಿಸಿದಂತೆ ಮಧುಪಂಡಿತ್‌ ದಾಸ್‌ ನೇತೃತ್ವದ ಬೆಂಗಳೂರು ಸೊಸೈಟಿ ದಾಖಲಾತಿಗಳನ್ನು ತಿದ್ದಿ, ಸುಳ್ಳು ಪ್ರಮಾಣ ಪತ್ರಗಳನ್ನು ಸೃಷ್ಟಿಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಸಿಟಿ ಸಿವಿಲ್‌ ಕೋರ್ಟ್‌ ತೀರ್ಪನ್ನು ವಿಭಾಗೀಯ ಪೀಠ ರದ್ದು ಮಾಡಿ, ಬೆಂಗಳೂರು ಇಸ್ಕಾನ್‌ ಶಾಖೆಯ ಒಡೆತನ ಮುಂಬೈ ಶಾಖೆಗೆ ಸೇರಿದೆಂದು ತೀರ್ಪು ನೀಡಿತು.

ತಡೆಯಾಜ್ಞೆಗೆ ಅರ್ಜಿ: ಹೈಕೋರ್ಟ್‌ ವಿಭಾಗೀಯ ಪೀಠ ಸೋಮವಾರ ನೀಡಿರುವ ತೀರ್ಪಿಗೆ ತಡೆ ಕೋರಿ ಇಸ್ಕಾನ್‌ ಬೆಂಗಳೂರು ಶಾಖೆಯ ಅಧ್ಯಕ್ಷ ಮಧುಪಂಡಿತ್‌ ದಾಸ್‌ ಮತ್ತು ಉಪಾಧ್ಯಕ್ಷ ಚಂಚಲಪತಿ ದಾಸ್‌ ಇಂದೇ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದರು. ತಡೆಯಾಜ್ಞೆ ಕೋರಿ ಸಲ್ಲಿಸಿರುವ ರಿಟ್‌ ಅರ್ಜಿಯ ವಿಚಾರಣೆ ಮಂಗಳವಾರ ಬೆಳಿಗ್ಗೆ ನಡೆಯಲಿದೆ.

English summary
The legal battle between Bangalore and Mumbai arms of the International Society for Krishna Consciousness (Iskcon) ended on Monday with the Karnataka high court ruling that the Mumbai Iskcon had rights over the properties of Iskcon, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X