ಕೆಎಸ್ಆರ್ಟಿಸಿ ಬಸ್ ನಲ್ಲಿ ನಕಲಿ ಟಿಕೆಟ್ ಮಾರುತ್ತಿದ್ದ ಕಂಡಕ್ಟರ್

ಅಶೋಕ್ ಪಾಟೀಲ್ ನೇತೃತ್ವದ ಸ್ಕ್ವಾಡ್ ತಂಡ ಈಶ್ವರ್ ಎಂಬ ಬಸ್ ನಿರ್ವಾಹಕನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಈತ ಹೈದರಾಬಾದ್- ದಾವಣಗೆರೆ ಬಸ್ ರೂಟ್ ನಲ್ಲಿ ಪ್ರಯಾಣಿಕರಿಗೆ ನಕಲಿ ಟಿಕೆಟ್ ನೀಡುತ್ತಿದ್ದ. ರಾಜ್ಯ ರಸ್ತೆ ಸಾರಿಗೆಗೆ ವಂಚಿಸಿದ ಈತನ ವಿರುದ್ಧ ಸದಾರ್ ಬಜಾರ್ ಪೋಲಿಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯ ರಸ್ತೆ ಸಾರಿಗೆ ವಿಭಾಗದ ಅಧಿಕಾರಿಗಳು ಈತನಿಂದ ಸುಮಾರು 14 ಸಾವಿರ ರು. ಮೌಲ್ಯದ ಬೋಗಸ್ ಟಿಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಆತ ಸುಮಾರು 4 ಸಾವಿರ ರು. ಮೌಲ್ಯದ ನಕಲಿ ಟಿಕೆಟ್ ಗಳನ್ನು ಪ್ರಯಾಣಿಕರಿಗೆ ವಿತರಿಸಿಯಾಗಿತ್ತು.
ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ವಂಚಿಸಲು ಬೋಗಸ್ ಟಿಕೆಟ್ಗಳನ್ನು ಎಲ್ಲಿಂದ ಮುದ್ರಿಸುತ್ತಿದ್ದ? ಇಂತಹ ದಂಧೆ ಮಾಡುತ್ತಿರುವ ಜಾಲವೇ ಇದೆಯೇ ಎಂಬುದು ಇನ್ನು ತನಿಖೆಯಿಂದ ತಿಳಿದು ಬರಬೇಕಿದೆ.











Click it and Unblock the Notifications