ಉಡುಪಿಯಲ್ಲಿ ಬೌದ್ಧ ಧರ್ಮಕ್ಕೆ ದಲಿತರ ಮತಾಂತರ

ಬನ್ನಂಜೆಯಲ್ಲಿ ನಾರಾಯಣ ಗುರು ಸಭಾಂಗಣದಲ್ಲಿ ನಡೆಯಲಿರುವ ಈ ವಿಶಿಷ್ಟ ಸಮಾರಂಭವನ್ನು ಕರ್ನಾಟಕ ಬೌದ್ಧ ಮಹಾಸಭಾ, ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಅಭಿದಾಮ ಟ್ರಸ್ಟ್ ಬೆಂಗಳೂರು ಮತ್ತು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್) ಜಂಟಿಯಾಗಿ ಆಯೋಜಿಸಿವೆ.
ಜಗತ್ತಿನಾದ್ಯಂತ ಬೌದ್ಧ ಧರ್ಮ ತನ್ನ ವಿಚಾರ ಮತ್ತು ಸರಳತೆಯಿಂದಾಗಿ ಜನರನ್ನು ಆಕರ್ಷಿಸುತ್ತಿದೆ. ಅಸ್ಪೃಶ್ಯತೆ, ಮೇಲಿನ ಜಾತಿಯವರ ತಾರತಮ್ಯ ಮತ್ತು ಹಿಂದೂ ಧರ್ಮದಲ್ಲಿರುವ ಕೆಲ ನಿಬಂಧಿತ ಆಚರಣೆಗಳಿಂದಾಗಿ ದಲಿತರು ರೋಸಿ ಹೋಗಿದ್ದಾರೆ. ಇದರಿಂದಾಗಿ ತಾವಾಗಿಯೇ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ ಎಂದು ಸುಂದರ್ ತಿಳಿಸಿದ್ದಾರೆ.
ಜಿಲ್ಲಾ ಅಂಬೇಡ್ಕರ್ ಭವನದಿಂದ ಬೆಳಿಗ್ಗೆ 10 ಗಂಟೆಗೆ ಮೆರವಣಿಗೆ ಹೊರಟು ಸಮಾರಂಭದ ಸ್ಥಳ ತಲುಪಲಿದೆ. ನಂತರ ಸಾಮೂಹಿಕ ಮತಾಂತರ ಜರುಗಲಿದೆ. ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್ ಸೇರಿದಂತೆ ಅನೇಕ ಬೌದ್ಧ ಭಿಕ್ಷುಗಳು, ಪಂಡಿತರು ಭಾಗವಹಿಸಲಿದ್ದಾರೆ.
ಇತ್ತೀಚೆಗೆ ತಾನೆ ದಲಿತ ಕೇರಿಗಳಲ್ಲೆಲ್ಲ ಸಂಚರಿಸಿ ಪೇಜಾವರ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿಯವರು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ದಲಿತರಿಗೆ ಆಹ್ವಾನ ನೀಡಿದ್ದರು. ಮತಾಂತರವಾದರೆ ಹಿಂದೂ ಧರ್ಮಕ್ಕೇ ಮತಾಂತರವಾಗಿರಿ. ಬೇರೆ ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿರಿ ಎಂದು ಅವರು ಕರೆ ನೀಡಿದ್ದರು.











Click it and Unblock the Notifications