ಸಚಿವ ಆಕ್ಸಿಡೆಂಟ್ ಗೆ ಬಲಿ: ಜಯಲಲಿತಾಗೆ ಅಪಶಕುನ
ತಿರುಚ್ಚಿ,
ಮೇ 23: ಜಯಲಲಿತಾ ಮಂತ್ರಿಮಂಡಲದ ನೂತನ ಸಚಿವ ಎನ್. ಮಾರಿಯಂ ಪಿಚ್ಚೈ (60) ಸರ್ತೆ ಅಪಘಾತದಲ್ಲಿ ಸೋಮವಾರ ಬೆಳಗ್ಗೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರಿಗೆ ಒಬ್ಬ ಪುತ್ರಿ ಮತ್ತು ಮೂವರು ಪುತ್ರರು ಇದ್ದಾರೆ. ಸಿನಿಮಾ ವಿತರಕರಾಗಿದ್ದ ಪಿಚ್ಚೈ ಚಿತ್ರಮಂದಿರವನ್ನು ಹೊಂದಿದ್ದರು. id="toptextpromo">ಮೊದಲ
ಬಾರಿಗೆ ಸಚಿವರಾಗಿದ್ದ ಪಿಚ್ಚೈಗೆ ಮುಖ್ಯಮಂತ್ರಿ ಜಯಾ ಅವರು ಪರಿಸರ ಖಾತೆ ದಯಪಾಲಿಸಿದ್ದರು. ಸೋಮವಾರ ಮಧ್ಯಾಹ್ನ ನಿಗದಿಯಾಗಿದ್ದ 14ನೇ ಶಾಸಕಾಂಗ ಸಭೆಯ ನೂತನ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಚಿವ ಪಿಚ್ಚೈ ಚೆನ್ನೈನತ್ತ ಕಾರಿನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. id='are-slot-1' class='oiad oi-axt oiadv'> id='top-searched-articles'>ತಿರುಚ್ಚಿ-ಚೆನ್ನೈ
ರಾಷ್ಟ್ರೀಯ ಹೆದ್ದಾರಿಯಲ್ಲಿ ಪೆರಂಬಲೂರು ಜಿಲ್ಲೆ ಪಡಲೂರು ಬಳಿ ಈ ಅಪಘಾತ ಸಂಭವಿಸಿದ್ದು, ವೇಗವಾಗಿ ಚಲಿಸುತ್ತಿದ್ದ ಪಿಚ್ಚೈ ಅವರ ಕಾರು ಎದುರಿನಿಂದ ಬರುತ್ತಿದ್ದ ಲಾರಿಗೆ ನೇರವಾಗಿ ಢಿಕ್ಕಿ ಹೊಡೆದಿದೆ. ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಪಿಚ್ಚೈ ಅವರ ಕಾರನ್ನು ಹಿಂಬಾಲಿಸುತ್ತಿದ್ದ ಕ್ರೀಡಾ ಸಚಿವ ಶಿವಪತಿ ಅವರು ಅಪಘಾತಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.











Click it and Unblock the Notifications