ಚಿತ್ರದುರ್ಗದ ಭಾರತೀಯ ವಿಜ್ಞಾನ ಸಂಸ್ಥೆ ಚಟುವಟಿಕೆ ಗೂಡು

ಫೆಬ್ರವರಿ 26ರಂದು ಉದ್ಘಾಟನೆಗೊಂಡ IISc ಕ್ಯಾಂಪಸ್ ನಲ್ಲಿರುವ ಟ್ಯಾಲೆಂಟ್ ಡೆವಲಪ್ ಮೆಂಟ್ ಸೆಂಟರ್ ನಲ್ಲಿ ಹೈಸ್ಕೂಲ್ ಸೈನ್ಸ್ ಟೀಚರ್ಸ್ ಟ್ರೈನಿಂಗ್ ಸೆಂಟರ್ ಪ್ರೊಗ್ರಾಮ್ ಮೂಲಕ ಮೊದಲ ಶಿಕ್ಷಣ ಕಾರ್ಯಕ್ರಮವನ್ನು ಇತ್ತೀಚೆಗೆ ಪೂರ್ಣಗೊಳಿಸಲಾಗಿದೆ. 10 ದಿನಗಳ ಕಾಲ ಜಿಲ್ಲೆಯ 100ಕ್ಕೂ ಹೆಚ್ಚು ವಿಜ್ಞಾನ ಶಿಕ್ಷಕರಿಗೆ ತೀವ್ರ ತರಬೇತಿ ನೀಡಲಾಗಿದೆ.
ರಾಜ್ಯದ ನಾನಾ ಭಾಗಗಳಲ್ಲಿರುವ 105 ಹೈಸ್ಕೂಲ್ ಗಳ 5,000 ಕ್ಕೂ ಹೆಚ್ಚು ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡುವ ಗುರಿಯನ್ನೂ ಹೊಂದಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ಪ್ರಯೋಗಾತ್ಮಕವಾಗಿ ತರಬೇತಿ ನೀಡಲಾಗಿದೆ. ಜತೆಗೆ ಜಲ ಮತ್ತು ವಾಯು ಮಾಲಿನ್ಯದ ಬಗ್ಗೆಯೂ ಅರಿವು ಮೂಡಿಸಲಾಗಿದೆ. ವಿದ್ಯಾರ್ಥಿಗಳಿಗೆ ನಿಖರ ಮಾಹಿತಿಯುಕ್ತ ಶಿಕ್ಷಣ ಕಲ್ಪಿಸುವಂತಾಗಲು ಈ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.
ಗಮನಾರ್ಹವೆಂದರೆ IISc ಕ್ಯಾಂಪಸ್ ಸಮೀಪದಲ್ಲಿಯೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಭಾಭಾ ಅಣು ಸಂಶೋಧನೆ ಕೇಂದ್ರ (BARC) ಮತ್ತು ISRO ಕೇಂದ್ರಗಳೂ ಇಲ್ಲಿ ತಲೆಯೆತ್ತಲಿವೆ. 400 ಎಕರೆ ಔದ್ಯಮಿಕ ಭೂಮಿ, 409 ಎಕರೆ ಟೌನ್ ಶಿಪ್, 50 ಎಕರೆ ವಸತಿ ಸಮುಚ್ಚ IISc ಕ್ಯಾಂಪಸ್ ನಲ್ಲಿ ಅಸ್ತಿತ್ವಕ್ಕೆ ಬರಲಿದೆ. ಒಟ್ಟಾರೆ ಇದು ವಿಜ್ಞಾನ ಕೇಂದ್ರವಾಗಿ ಕಂಗೊಳಿಸಲಿದೆ ಎಂದು ಚಿತ್ರದುರ್ಗದ ಬಿಜೆಪಿ ಸಂಸದ ಮತ್ತು IISc ಹಳೆಯ ವಿದ್ಯಾರ್ಥಿ ಜನಾರ್ದನ ಸ್ವಾಮಿ ತಿಳಿಸಿದ್ದಾರೆ.












Click it and Unblock the Notifications