ಹಾಸನದಲ್ಲಿ ಚಿರತೆ ಕೊಂದವರಿಗೆ ಕಾದಿದೆ ಮಾರಿ ಹಬ್ಬ!

Leopard
ಹಾಸನ, ಮೇ 20: ಹಾಸನದ ಲಿಂಗರಸನಹಳ್ಳಿಯಲ್ಲಿ ಚಿರತೆಯನ್ನು ಕಲ್ಲು ಹೊಡೆದು ಸಾಯಿಸಿದ ಜನರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸುವ ನಿರೀಕ್ಷೆಯಿದೆ. ತೀವ್ರ ಕಾಲು ನೋವಿನಿಂದ ಗ್ರಾಮದಲ್ಲಿ ಉಳಿದ ಚಿರತೆಯನ್ನು ಗ್ರಾಮಸ್ಥರು ಬುಧವಾರ ಕಲ್ಲು ಹೊಡೆದು ಸಾಯಿಸಿದ್ದರು.

"1972ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ಚಿರತೆಯನ್ನು ಕಲ್ಲು ಹೊಡೆದು ಸಾಯಿಸಿರುವುದು ಅಪರಾಧವಾಗಿದೆ" ಎಂದು ಡೆಪ್ಯೂಟಿ ಅರಣ್ಯಾಧಿಕಾರಿ ಅಪ್ಪಾ ರಾವ್ ಹೇಳಿದ್ದಾರೆ. ಈ ಘಟನೆ ಕುರಿತು ಸಂಪೂರ್ಣ ತನಿಖೆ ಮಾಡುವಂತೆ ತಿಳಿಸಲಾಗಿದೆ.

ಚಿರತೆ ಕಾಲಿಗೆ ತೀವ್ರ ಗಾಯವಾದ ಸ್ಥಿತಿಯಲ್ಲಿ ಕಾಡಿಗೆ ಹೋಗಲಾರದೆ ಗ್ರಾಮದಲ್ಲಿಯೇ ಉಳಿದಿತ್ತು. ಆದರೆ ಜನರು ಕುತೂಹಳದಿಂದ ನೋಡಲು ಹತ್ತಿರಕ್ಕೆ ಹೋದಾಗ ಸಹಜವಾಗಿಯೇ ಕುಪಿತಗೊಂಡಿದೆ. ಪತ್ರಕರ್ತರೊಬ್ಬರನ್ನು ಚಿರತೆ ಗಾಯಗೊಳಿಸಿದಾಗ ಜನರು ಕಲ್ಲು ಹೊಡೆಯತೊಡಗಿದ್ದಾರೆ. ತಲೆಗೆ ಕಲ್ಲೇಟಿನಿಂದ ಗಾಯವಾಗಿ ಚಿರತೆ ಸ್ಥಳದಲ್ಲಿಯೇ ಮೃತಪಟ್ಟಿತ್ತು.

"ಚಿರತೆಯನ್ನು ಕಲ್ಲು ಹೊಡೆದು ಸಾಯಿಸಿದವರನ್ನು ಗುರುತಿಸಲು ನಮಗೆ ಸಾಧ್ಯವಾದಲ್ಲಿ ಅವರೆಲ್ಲರ ವಿರುದ್ಧ 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆಯನ್ವಯ ಪ್ರಕರಣ ದಾಖಲಿಸಲಾಗುವುದು. ಇದರೊಂದಿಗೆ ಚಿರತೆಯನ್ನು ಕಾಪಾಡಲು ಬಂದ ಅರಣ್ಯ ಸಿಬ್ಬಂದಿಗೂ ಗ್ರಾಮಸ್ಥರು ತೊಂದರೆ ನೀಡಿದ್ದಾರೆ" ಎಂದು ಅಪ್ಪಾ ರಾವ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+