ರಾಷ್ಟ್ರಲಾಂಛನಕ್ಕೆ ಅಗೌರವ, ವಿಜೇಂದರ್ ವಿರುದ್ಧ ದೂರು
ದೆಹಲಿ,
ಮೇ 20: ಇತ್ತೀಚೆಗೆ ತನ್ನ ಗೆಳತಿಯನ್ನು ಮದುವೆಯಾದ ಬಾಕ್ಸರ್ ವಿಜೇಂದರ್ ಸಿಂಗ್ ವಿರುದ್ಧ ದೆಹಲಿ ನಿವಾಸಿಯೊಬ್ಬರು ಹರ್ಯಾಣ ಮುಖ್ಯಮಂತ್ರಿ ಮತ್ತು ಪೋಲಿಸರಿಗೆ ಆನ್ ಲೈನ್ ನಲ್ಲಿ ದೂರು ನೀಡಿದ್ದಾರೆ. id="toptextpromo">ವಿಜೇಂದರ್
ಮದುವೆಯ ರಿಸೆಪ್ಷನ್ ಆಮಂತ್ರಣ ಪತ್ರಿಕೆಯಲ್ಲಿ ರಾಷ್ಟ್ರೀಯ ಲಾಂಛನವನ್ನು ಪ್ರಕಟಿಸಿರುವ ವಿರುದ್ಧ ದೂರು ನೀಡಲಾಗಿದೆ. ದೇಶದ ರಾಷ್ಟ್ರೀಯ ಲಾಂಛನವನ್ನು ಪ್ರಕಟಿಸಿದಕ್ಕೆ ಇಲ್ಲಿವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಹೀಗಾಗಿ ಈಗ ದೆಹಲಿ ನಿವಾಸಿಯೊಬ್ಬರು ಹರ್ಯಾಣದ ಮುಖ್ಯಮಂತ್ರಿಯವರಿಗೆ ಮತ್ತು ಪೋಲಿಸರಿಗೆ ಆನ್ ಲೈನ್ ಮೂಲಕ ದೂರು ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>"ನಾನು
ವಿಜೇಂದರ್ ಸಿಂಗ್ ಅವರಿಗೆ ಗೌರವ ನೀಡುತ್ತೇನೆ. ಆದರೆ ರಾಷ್ಟ್ರೀಯ ಲಾಂಛನಕ್ಕೆ ಅಗೌರವ ಸಹಿಸುವುದಿಲ್ಲ. ಯಾರು ಕೂಡ ಇದನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಜನರೆಲ್ಲ ಈ ದೂರು ವಾಪಸ್ ಪಡೆಯುವಂತೆ ನನ್ನಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಆದರೆ ನನ್ನ ಪ್ರಶ್ನೆ ಏನೆಂದರೆ ದೇಶಕ್ಕಿಂತ ದೊಡ್ಡ ವಿಷಯ ಯಾವುದಿದೆ?" ಎಂದು ದೂರು ನೀಡಿರುವ ಅಭಿಷೇಕ್ ಪ್ರಶ್ನಿಸುತ್ತಾರೆ.











Click it and Unblock the Notifications