ಹಂಸರಾಜ್ ಭಾರದ್ವಾಜ್ ಸದ್ದಾಂ ಹುಸೇನ್ ಅಲ್ಲ : ಸಿಟಿ ರವಿ
ಬೆಂಗಳೂರು,
ಮೇ 16 : ಬಿಜೆಪಿ ಸರಕಾರಕ್ಕೆ ಬಹುಮತವಿದ್ದರೂ, ಯಾವುದೇ ವಿವೇಚನೆಯಿಲ್ಲದೆ ವಿಧಾನಸಭೆಯನ್ನು ಅಮಾನತಿನಲ್ಲಿಡಲು ಕೇಂದ್ರಕ್ಕೆ ಶಿಫಾರಸು ಮಾಡಿರುವ ಸನ್ಮಾನ್ಯ ಹಂಸರಾಜ್ ಭಾರದ್ವಾಜ್ ಅವರು ಒಬ್ಬ ಕರ್ನಾಟಕ ದ್ರೋಹಿ ಎಂದು ತಮ್ಮ ನೇರಾನೇರ ಮಾತುಗಳಿಗೆ ಹೆಸರಾಗಿರುವ ಚಿಕ್ಕಮಗಳೂರು ಶಾಸಕ ಸಿಟಿ ರವಿ ಅವರು ಖಂಡತುಂಡವಾಗಿ ಹೇಳಿದ್ದಾರೆ. id="toptextpromo">ಜನರಿಂದಲೇ
ಆಯ್ಕೆಯಾಗಿರುವ ಬಿಜೆಪಿ ಸರಕಾರಕ್ಕೆ ಈ ಸಂದಿಗ್ಧ ಸ್ಥಿತಿಯಿಂದ ಹೊರಬರುವ ಸಾಮರ್ಥ್ಯವಿದೆ. ರಾಜಕೀಯ ಮಟ್ಟದಲ್ಲಿ ಮಾತ್ರವಲ್ಲ, ಕಾನೂನು ಮುಖಾಂತರವೂ ರಾಜ್ಯಪಾಲರ ಈ ನಿರ್ಣಯದ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ. ರಾಜ್ಯಪಾಲರೇನು ಸರ್ವಾಧಿಕಾರಿ ಸದ್ದಾಂ ಹುಸೇನ್ ಅಥವಾ ಗಡಾಫಿ ಅಲ್ಲ. ಅವರು ಈ ಪ್ರಜಾಪ್ರಭುತ್ವದಲ್ಲಿ ತಮ್ಮ ಅಧಿಕಾರದ ಚೌಕಟ್ಟಿನಲ್ಲಿಯೇ ಕೆಲಸ ಮಾಡಬೇಕಾಗುತ್ತದೆ. ಅದನ್ನು ಅವರು ಮಾಡಿಲ್ಲ ಎಂದು ಅವರು ಬೆಂಗಳೂರಿನಲ್ಲಿ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಎಲ್ಲಾ
ಕ್ಷೇತ್ರಗಳಿಂದ ಬಿಜೆಪಿ ಶಾಸಕರು ಬೆಂಗಳೂರಿಗೆ ಆಗಮಿಸಿದ್ದು, ಇಂದು ಮಧ್ಯಾಹ್ನ 1 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ತುರ್ತು ಸಭೆಯನ್ನು ಕಲೆಯಲಾಗಿದೆ. ಈ ಸಭೆಗೆ ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಅವರು ಕೂಡ ಬರುವ ನಿರೀಕ್ಷೆಯಿದೆ. ಈ ಸಭೆಗೆ ಮೊದಲು ರಾಜಭವನದ ಎದಿರು ಮುಖ್ಯಮಂತ್ರಿ ಯಡಿಯೂರಪ್ಪ ಆದಿಯಾಗಿ ಎಲ್ಲರೂ ಪ್ರತಿಭಟನೆ ನಡೆಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.











Click it and Unblock the Notifications