ಶೀಘ್ರ ಸಕಲೇಶಪುರ To ಶ್ರವಣಬೆಳಗೊಳಕ್ಕೆ ರೈಲು
ಹಾಸನ,
ಮೇ.14: ಸಕಲೇಶಪುರ ಹಾಗೂ ಶ್ರವಣಬೆಳಗೊಳ ನಡುವೆ ಹಾಸನ ಮಾರ್ಗವಾಗಿ ಶೀಘ್ರದಲ್ಲೆ ಹೊಸ ರೈಲು ಸೇವೆಯನ್ನು ಆರಂಭಿಸುವುದಾಗಿ ಮೈಸೂರು ವಿಭಾಗೀಯ ರೈಲ್ವೆ ಮ್ಯಾನೇಜರ್ ಬಿ ಬಿ ವರ್ಮಾ ತಿಳಿಸಿದ್ದಾರೆ. ಮುಂಬರುವ ಒಂದು ತಿಂಗಳಲ್ಲಿ ಹೊಸ ರೈಲು ಸೇವೆ ಆರಂಭವಾಗುವುದು ಎಂದು ಅವರು ಹೇಳಿದರು. id="toptextpromo">ಹಾಸನದಲ್ಲಿ
ರೈಲ್ವೆ ಇನ್ಸಿಟಿಟ್ಯೂಟನ್ನು ಉದ್ಘಾಟಿಸಲು ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಸಕಲೇಶಪುರ ಮತ್ತು ಶ್ರಮಣಬೆಳಗೊಳ ನಡುವೆ ರೈಲು ಸೇವೆ ಆರಂಭಿಸಲು ರೈಲ್ವೆ ಭದ್ರತಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತಾವನೆ ಅಂಗೀಕೃತವಾದ ಕೂಡಲೆ ಹೊಸ ರೈಲುಗಳ ಓಡಾಟ ಈ ಎರಡು ಸ್ಥಳಗಳನ್ನು ಸಂಪರ್ಕಿಸಲಿದೆ ಎಂದರು. id='are-slot-1' class='oiad oi-axt oiadv'> id='top-searched-articles'>ಅರಸೀಕೆರೆಯಿಂದ
ಹಾಸನ ಮಾರ್ಗವಾಗಿ ಮೈಸೂರಿಗೆ ಹೊಸ ರೈಲು ಸೇವೆಗೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಬಳಿಕ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಅವರು, ಶ್ರೀರಂಗಪಟ್ಟಣ ನಿಲ್ದಾಣದ ಬಳಿ ಕಾಮಗಾರಿಯನ್ನು ಪುರಾತತ್ವ ಇಲಾಖೆ ತೀವ್ರವಾಗಿ ವಿರೋಧಿಸಿದೆ. ಹಾಗಾಗಿ ಬೆಂಗಳೂರು ಮೈಸೂರು ನಡುವಿನ ಟ್ರ್ಯಾಕ್ ಡಬ್ಲಿಂ ಗ್ ವಿಳಂಬವಾಗಲಿದೆ. ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಭೂ-ಸ್ವಾಧೀನ ಪ್ರಕ್ರಿಯೆಗೆ ಹಲವಾರು ಸಮಸ್ಯೆಗಳು ಎದುರಾಗಿವೆ. ಈ ಎಲ್ಲಾ ಕಾರಣಗಳಿಂದ ಕಾಮಗಾರಿ ವಿಳಂಬವಾಗಲಿದೆ ಎಂದರು. (ಏಜೆನ್ಸೀಸ್)











Click it and Unblock the Notifications